ಇನ್ಮುಂದೆ ಸಾಬೂನು, ಶಾಂಪೂ, ಟೂತ್‌ಪೇಸ್ಟ್‌ಗಳ ಮೇಲೂ ವೆಜ್-ನಾನ್ ವೆಜ್ ಲೇಬಲ್ ಕಡ್ಡಾಯ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಯಮಗಳು ಸೋಮವಾರದಿಂದಲೇ ಜಾರಿಗೆ ಬಂದಿವೆ.
Shampoos, Soaps And Toothpaste To Carry Veg, Non-Veg Markings Under New Rules
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಸೋಪ್, ಶಾಂಪೂ ಮತ್ತು ಟೂತ್‌ಪೇಸ್ಟ್‌ನಂತಹ ಸೌಂದರ್ಯವರ್ಧಕಗಳು ಹಾಗೂ ಬಾತ್ ರೂಮ್ ಬಳಕೆಯ ಉತ್ಪನ್ನಗಳ ಪ್ಯಾಕೇಜಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಹೊರಡಿಸಿದೆ. ಈ ನಿಯಮಗಳು ಗ್ರಾಹಕರಿಗೆ ಉತ್ಪನ್ನವು ಸಸ್ಯಾಹಾರಿ ಮೂಲದ್ದೇ ಅಥವಾ ಮಾಂಸಾಹಾರಿ ಮೂಲದ್ದೇ ಎಂಬುದನ್ನು ಗುರುತಿಸಲು ಅನುವು ಮಾಡಿಕೊಡುತ್ತವೆ.

ಇನ್ನು ಮುಂದೆ ಸಾಬೂನು, ಶಾಂಪೂ, ಟೂತ್‌ಪೇಸ್ಟ್‌ಗಳ ಮೇಲೂ ಆಹಾರ ಪದಾರ್ಥಗಳ ಮಾದರಿಯಲ್ಲಿ ಸಸ್ಯಾಹಾರಿ ಅಥವಾ ಮಾಂಸಾಹಾರಿ ಮೂಲದ್ದೇ ಎಂಬುದನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ. ಈ ಉತ್ಪನ್ನಗಳ ಪ್ಯಾಕೇಟ್ ಗಳ ಮೇಲೆ ಕಡ್ಡಾಯವಾಗಿ ಹಸಿರು ಮತ್ತು ಕೆಂಪು ಬಣ್ಣದ ಗುರುತು ಇರಲಿದೆ.

ಹೊಸ ನಿಯಮಗಳ ಪ್ರಕಾರ, ಸಸ್ಯಾಹಾರಿ ಮೂಲದ ಉತ್ಪನ್ನಗಳ ಮೇಲೆ ಹಸಿರು ಚುಕ್ಕೆ (green dot) ಇರಬೇಕು ಮತ್ತು ಮಾಂಸಾಹಾರಿ ಮೂಲದ ಉತ್ಪನ್ನಗಳ ಮೇಲೆ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ(red or brown dot) ಇರಬೇಕು.

Shampoos, Soaps And Toothpaste To Carry Veg, Non-Veg Markings Under New Rules
ಇನ್ಮುಂದೆ ನಕಲಿ ಡಿಸ್ಕೌಂಟ್‌, ಸುಳ್ಳು ಆಫರ್‌ಗಳಿಗೆ ಬೀಳಲಿದೆ ಬ್ರೇಕ್! ಆನ್‌ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ

ಈ ಗುರುತನ್ನು ಪ್ಯಾಕೇಜ್‌ನ ಪ್ರಮುಖ ಪ್ರದರ್ಶನ ಫಲಕದ(principal display panel) ಮೇಲ್ಭಾಗದಲ್ಲಿ ಅಳವಡಿಸಬೇಕು ಎಂದು ನಿಯಮಗಳು ಹೇಳುತ್ತವೆ.

ಗ್ರಾಹಕ ವ್ಯವಹಾರಗಳ ಸಚಿವಾಲಯವು 'ಲೀಗಲ್ ಮೆಟ್ರಾಲಜಿ (ಪ್ಯಾಕೇಜ್ಡ್ ಕಮಾಡಿಟೀಸ್) ನಿಯಮಗಳು, 2011'ಕ್ಕೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆಯನ್ನು ಜಾರಿಗೆ ತಂದಿದೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಯಮಗಳು ಸೋಮವಾರದಿಂದಲೇ ಜಾರಿಗೆ ಬಂದಿವೆ.

ಇದರರ್ಥ, ಇನ್ನು ಮುಂದೆ ಸೋಪ್, ಶಾಂಪೂ ಅಥವಾ ಟೂತ್‌ಪೇಸ್ಟ್ ಖರೀದಿಸುವಾಗ, ಪ್ಯಾಕೇಜಿಂಗ್ ಮೇಲಿರುವ ಹಸಿರು, ಕೆಂಪು ಅಥವಾ ಕಂದು ಬಣ್ಣದ ಗುರುತುಗಳ ಮೂಲಕ ಗ್ರಾಹಕರು ಉತ್ಪನ್ನದ ಮೂಲವನ್ನು ಗುರುತಿಸಲು ಸಾಧ್ಯವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com