ತಮಿಳುನಾಡು ಸರ್ಕಾರಿ ಹಾಸ್ಟೆಲ್​ಗಳ ಮೆನುವಿನಲ್ಲಿ ಗೋಮಾಂಸ ಸೇರ್ಪಡೆ?: ವಿದ್ಯಾರ್ಥಿಗಳ ಮನವಿ ಕುರಿತು ಶೀಘ್ರ ನಿರ್ಧಾರ ಎಂದ ಸಚಿವ!

ಹಾಸ್ಟೆಲ್​ನ ಕೆಲವು ವಿದ್ಯಾರ್ಥಿಗಳು ಊಟದ ಮೆನುವಿನಲ್ಲಿ ಗೋಮಾಂಸ ಸೇರಿಸುವಂತೆ ಮನವಿ ಮಾಡಿದ್ದಾರೆ. ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
Beef in Tamil Nadu govt hostels? Minister Vanni Arasu says decision on students' request soon
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ತಮಿಳುನಾಡಿನ ಸರ್ಕಾರಿ ಹಾಸ್ಟೆಲ್‌ಗಳ ಆಹಾರ ಪಟ್ಟಿಯಲ್ಲಿ(ಮೆನು) ಗೋಮಾಂಸವನ್ನು ಸೇರಿಸುವಂತೆ ಕೆಲವು ವಿದ್ಯಾರ್ಥಿಗಳು ಮನವಿ ಮಾಡಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವಣ್ಣಿ ಅರಸು ಅವರು ಹೇಳಿದ್ದಾರೆ.

ಹಾಸ್ಟೆಲ್​ನ ಕೆಲವು ವಿದ್ಯಾರ್ಥಿಗಳು ಊಟದ ಮೆನುವಿನಲ್ಲಿ ಗೋಮಾಂಸ ಸೇರಿಸುವಂತೆ ಮನವಿ ಮಾಡಿದ್ದಾರೆ. ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸೈದಾ‌ಪೇಟೆಯಲ್ಲಿರುವ 'ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ಹಾಸ್ಟೆಲ್'ನ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರಸು, ವಿದ್ಯಾರ್ಥಿಗಳ ಅಭಿಪ್ರಾಯದ ಆಧಾರದ ಮೇಲೆ ಹಾಸ್ಟೆಲ್ ಆಹಾರ ಪಟ್ಟಿಯಲ್ಲಿ ಇಲಾಖೆಯು ಕೆಲವು ಬದಲಾವಣೆಗಳನ್ನು ಮಾಡುತ್ತಿದೆ ಎಂದು ಹೇಳಿದರು. ಅಲ್ಲದೆ, ಅಸ್ತಿತ್ವದಲ್ಲಿರುವ ಆಹಾರ ಪಟ್ಟಿಯನ್ನು ಈಗಾಗಲೇ ಪರಿಷ್ಕರಿಸಲಾಗಿದ್ದು, ಮಟನ್ ಮತ್ತು ಚಿಕನ್‌ನಂತಹ ಮಾಂಸಾಹಾರಿ ಪದಾರ್ಥಗಳೊಂದಿಗೆ ವಾರಕ್ಕೊಮ್ಮೆ ಬಿರಿಯಾನಿ ಸೇವೆಯನ್ನು ಜಾರಿಗೆ ತರಲಾಗಿದೆ ಎಂದರು.

Beef in Tamil Nadu govt hostels? Minister Vanni Arasu says decision on students' request soon
ಶಾಲಾ ಮಕ್ಕಳಿಗೆ ಪೊಂಗಲ್ ಬಡಿಸಿ, ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದ ತಮಿಳುನಾಡು ಸಿಎಂ ವಿಜಯ್; Video Viral

ಆದರೆ, ಗ್ರಾಮೀಣ ಹಿನ್ನೆಲೆಯಿಂದ ಬರುವ ಕೆಲವು ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ಮಟನ್ ತುಸು ದುಬಾರಿಯಾಗಿರುವುದರಿಂದ ಅದನ್ನು ತಾವು ಹೆಚ್ಚಾಗಿ ಸೇವಿಸಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕಾರಣದಿಂದಾಗಿ ಸಾಂಪ್ರದಾಯಿಕ ಮಾಂಸಾಹಾರಿ ಆಯ್ಕೆಗಳ ಜೊತೆಗೆ ಗೋಮಾಂಸವನ್ನೂ ಮೆನುವಿಗೆ ಸೇರಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯು ಹಾಸ್ಟೆಲ್ ಮೆನುವಿನಲ್ಲಿ ಹಂತ ಹಂತವಾಗಿ ಸಕಾರಾತ್ಮಕ ಸುಧಾರಣೆಗಳನ್ನು ತರುತ್ತಿದೆ ಎಂದು ಸಚಿವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com