ಕಣ್ಣೂರಿನ ಲಾಟರಿ ಟಿಕೆಟ್‌ಗೆ 30 ಕೋಟಿ ರೂ.ಗಳ ತಿರುವೋಣಂ ಬಂಪರ್ ಜಾಕ್‌ಪಾಟ್!

ತಲಾ 1 ಕೋಟಿ ರೂ.ಗಳ ದ್ವಿತೀಯ ಬಹುಮಾನವನ್ನು 20 ವಿಜೇತರಿಗೆ ನೀಡಲಾಗುವುದು ಮತ್ತು ತಲಾ 25 ಲಕ್ಷ ರೂ.ಗಳ ತೃತೀಯ ಬಹುಮಾನವನ್ನು 20 ವಿಜೇತರು ಪಡೆಯಲಿದ್ದಾರೆ.
Thiruvonam bumper jackpot
ತಿರುವೋಣಂ ಬಂಪರ್ ಜಾಕ್‌ಪಾಟ್!online desk
Updated on: 

ತಿರುವನಂತಪುರಂ: ಕಣ್ಣೂರು ಜಿಲ್ಲೆಯ ಚಕ್ಕರಕ್ಕಲ್‌ನಲ್ಲಿರುವ ಏಜೆನ್ಸಿಯೊಂದು ಮಾರಾಟ ಮಾಡಿದ ಲಾಟರಿ ಟಿಕೆಟ್, 'ತಿರುವೋಣಂ ಬಂಪರ್ ಲಾಟರಿ'ಯಲ್ಲಿ 30 ಕೋಟಿ ರೂ.ಗಳ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಹುಮಾನ ಗೆದ್ದವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ರಾಜ್ಯ ಲಾಟರಿ ಇಲಾಖೆಯ ಮೂಲಗಳು ಇಲ್ಲಿ ತಿಳಿಸಿವೆ.

ಇಲ್ಲಿನ ಗೋರ್ಕಿ ಭವನದಲ್ಲಿ ನಡೆದ ಲಾಟರಿ ಡ್ರಾ (ಫಲಿತಾಂಶ ಪ್ರಕಟಣೆ)ಯಲ್ಲಿ TL 360615 ಸಂಖ್ಯೆಯ ಟಿಕೆಟ್ ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದೆ. ಆರೋಗ್ಯ ಸಚಿವ ಕೆ. ಮುರಳೀಧರನ್ ಅವರು ಈ ಡ್ರಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. 500 ರೂ. ಬೆಲೆಯ ಈ ತಿರುವೋಣಂ ಬಂಪರ್ ಲಾಟರಿಗಾಗಿ ಈ ವರ್ಷ 90 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿತ್ತು ಮತ್ತು ಅವೆಲ್ಲವೂ ಮಾರಾಟವಾಗಿವೆ ಎಂದು ಅವರು ಹೇಳಿದರು.

ತಲಾ 1 ಕೋಟಿ ರೂ.ಗಳ ದ್ವಿತೀಯ ಬಹುಮಾನವನ್ನು 20 ವಿಜೇತರಿಗೆ ನೀಡಲಾಗುವುದು ಮತ್ತು ತಲಾ 25 ಲಕ್ಷ ರೂ.ಗಳ ತೃತೀಯ ಬಹುಮಾನವನ್ನು 20 ವಿಜೇತರು ಪಡೆಯಲಿದ್ದಾರೆ.

Thiruvonam bumper jackpot
'ನನ್ನನ್ನು ಕೊಂಡುಕೊಳ್ಳುವವರು ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ; ಲಾಟರಿ ಬ್ಯಾನ್​ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡ್ಕೊಂಡು ಬಂದಿದ್ದು ಯಾರು?'

ತಲಾ 5 ಲಕ್ಷ ರೂ.ಗಳ ನಾಲ್ಕನೇ ಬಹುಮಾನವನ್ನು 10 ವಿಜೇತರಿಗೆ ಮತ್ತು ತಲಾ 2 ಲಕ್ಷ ರೂ.ಗಳ ಐದನೇ ಬಹುಮಾನವನ್ನು 10 ವಿಜೇತರಿಗೆ ನೀಡಲಾಗುವುದು.

ಇತರ ಬಹುಮಾನಗಳಲ್ಲಿ 5,000 ರೂ., 2,000 ರೂ., 1,000 ರೂ. ಮತ್ತು 500 ರೂ. ಮೊತ್ತಗಳು ಸೇರಿವೆ. ಅಲ್ಲದೆ, ಒಂಬತ್ತು ವಿಜೇತರು ತಲಾ 5 ಲಕ್ಷ ರೂ.ಗಳ ಸಮಾಧಾನಕರ ಬಹುಮಾನವನ್ನು ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com