'2017ರಲ್ಲಿ ECಯನ್ನು ನಂಬಿದ್ದೆವು': 2022ರಲ್ಲಿ ಚುನಾವಣಾ ಅಧಿಕಾರಿಗಳು SP ಮತಗಳನ್ನು ಅಳಿಸಿಹಾಕಿದ್ದಾರೆ: ಅಖಿಲೇಶ್ ಯಾದವ್

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗೆ (SIR) ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಅವರ ಈ ಇತ್ತೀಚಿನ ಟೀಕೆ ಹೊರಬಿದ್ದಿದೆ.
Akhilesh Yadav
ಅಖಿಲೇಶ್ ಯಾದವ್
Updated on: 

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಸೇಶ್ ಯಾದವ್ ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಡವಳಿಕೆಯ ಕುರಿತಾದ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ ಅವರು, ಸಮಾಜವಾದಿ ಪಕ್ಷದ ಬೆಂಬಲಿಗರ ಮತಗಳನ್ನು ಉದ್ದೇಶಪೂರ್ವಕವಾಗಿಯೇ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗೆ (SIR) ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಅವರ ಈ ಇತ್ತೀಚಿನ ಟೀಕೆ ಹೊರಬಿದ್ದಿದೆ.

ಈ ಆರೋಪಿತ ಅಕ್ರಮವೇನೂ ಹೊಸದಲ್ಲ. ಇದು ಹಲವು ವರ್ಷಗಳಿಂದಲೂ ನಡೆಯುತ್ತಿದ್ದು, ಈಗಿನ ಏಕೈಕ ವ್ಯತ್ಯಾಸವೆಂದರೆ ಅದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

2022ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದ ಮತಗಳನ್ನು ಅಳಿಸಿಹಾಕಲು ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

'ನಾವು 2017ರಲ್ಲಿ ಸಾಕಷ್ಟು ಗಮನ ಹರಿಸಿರಲಿಲ್ಲ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿರುತ್ತದೆ ಮತ್ತು ತನ್ನ ವಿಶ್ವಾಸಾರ್ಹತೆಗೆ ಧಕ್ಕೆ ತರುವುದಿಲ್ಲ ಎಂದು ನಾವು ನಂಬಿದ್ದೆವು. 2022ರ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ತಮ್ಮ ಆತಂಕಗಳು ಸ್ಪಷ್ಟವಾದವು. 2022ರಲ್ಲಿ ಫಲಿತಾಂಶಗಳು ಬಂದಾಗ, ಸಮಾಜವಾದಿ ಪಕ್ಷದ ಮತಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಲು ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ಶಾಮೀಲಾಗಿದ್ದರು ಎಂದು ನಾನು ನಮ್ಮ ರಾಷ್ಟ್ರೀಯ ಸಮಾವೇಶದಲ್ಲಿ ಹೇಳಿದ್ದು ನನಗೆ ನೆನಪಿದೆ' ಎಂದರು.

Akhilesh Yadav
ಕಾಕ್ರೋಚ್ ಜನತಾ ಪಾರ್ಟಿಗೆ ಮಾತ್ರ CEC ಜ್ಞಾನೇಶ್ ಕುಮಾರ್‌ರನ್ನು ಕೆಳಗಿಳಿಸಲು ಸಾಧ್ಯ, ಇತರೆ ರಾಜಕೀಯ ಪಕ್ಷಗಳಿಗೆ ಅದು ಅಸಾಧ್ಯ'

'ಯಾವುದೇ ಮುನ್ಸೂಚನೆ ನೀಡದೆ ಹಾಗೂ ಯಾವುದೇ ನಿಯಮ ಅಥವಾ ಕಾನೂನುಗಳನ್ನು ಪಾಲಿಸದೆ, 2019ರಲ್ಲಿ ಮತ ಚಲಾಯಿಸಿದ್ದವರಿಗೆ 2022ರಲ್ಲಿ ಮತ ಚಲಾಯಿಸುವ ಅವಕಾಶವನ್ನು ನಿರಾಕರಿಸಲಾಯಿತು; ಇದರ ಪರಿಣಾಮವಾಗಿ 2022ರಲ್ಲಿ ಸಮಾಜವಾದಿ ಪಕ್ಷದ ಸರ್ಕಾರ ರಚನೆಯಾಗಲಿಲ್ಲ' ಎಂದು ಅವರು ಹೇಳಿದರು.

ಚುನಾವಣಾ ಆಯೋಗದ 'ಎಸ್‌ಐಆರ್' (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೂವರು ಚುನಾವಣಾ ಆಯುಕ್ತರ ಪೈಕಿ ಇಬ್ಬರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದರು ಎಂಬ ವಿಷಯ 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದ ನಂತರ ವಿವಾದ ಭುಗಿಲೆದ್ದಿದೆ.

ಅಂದಿನಿಂದ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com