Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಕಾಶ್ಮೀರದ ಯೂಸ್ಮಾರ್ಗ್‌ನ ಕೊರಾಗ್ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇನೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ವೇಳೆ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ, ಉಗ್ರರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಗುಂಡಿನ ದಾಳಿ ನಡೆಸಿದರು.
File photo
ಸಂಗ್ರಹ ಚಿತ್ರ
Updated on: 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಇ-ತೊಯ್ಬಾ (LeT) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನನ್ನು ಹೊಡೆದುರುಳಿಸಿದೆ.

ಹತ್ಯೆಗೀಡಾದ ಉಗ್ರನನ್ನು ಕಾಶ್ಮೀರ ಮೂಲದ ಚಿನಾರ್ ಕಾರ್ಪ್ಸ್ ಬಹಿರಂಗಪಡಿಸದಿದ್ದರೂ, ಅಧಿಕಾರಿಗಳು ಆತನನ್ನು ಸುಲೇಮಾನ್ ಶಾ ಅಲಿಯಾಸ್ ‘ಮೂಸಾ’ ಎಂದು ಗುರುತಿಸಿದ್ದಾರೆ.

ಮಧ್ಯ ಕಾಶ್ಮೀರದ ಯೂಸ್ಮಾರ್ಗ್‌ನ ಕೊರಾಗ್ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇನೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ವೇಳೆ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ, ಉಗ್ರರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ ಎಂದು ಸೇನೆ ತಿಳಿಸಿದೆ.

ಕಾರ್ಯಾಚರಣೆ ಮುಂದುವರಿದಿದ್ದಾಗಲೇ, ದೂರದ ದುಧ್‌ಪಥ್ರಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ‘ಮೂಸಾ’ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

File photo
ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!

ಕಳೆದ ಹಲವು ವರ್ಷಗಳಿಂದ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಬದಿಗಳಲ್ಲಿ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮೂಸಾ ಭದ್ರತಾ ಪಡೆಗಳಿಗೆ ಬೇಕಾಗಿದ್ದ.

ಈ ತಿಂಗಳ ಆರಂಭದಲ್ಲಿ ಯೂಸ್ಮಾರ್ಗ್ ಬೆಟ್ಟ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಿಂದ ಆತ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 5ರಂದು ನಡೆದ ಆ ಎನ್‌ಕೌಂಟರ್‌ನಲ್ಲಿ ಮೂಸಾನ ಆಪ್ತ ಸಹಚರ ಯಾಸಿರ್ ಹತನಾಗಿದ್ದ.

ಮೂಸಾನ ಹತ್ಯೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com