ಕಳೆದ ವರ್ಷ 2018ರ 72ನೇ ಸ್ವಾತಂತ್ರ್ಯ ದಿನಾಚರಣೆ ದಿನ ಕೆಂಪು ಮಿಶ್ರಿತ ಕೇಸರಿ ಬಣ್ಣದ ಪೇಟಾದಲ್ಲಿ ಕಾಣಿಸಿಕೊಂಡಿದ್ದರು. ಕೇಸರಿ ಬಣ್ಣ ತ್ಯಾಗ ಮತ್ತು ಧೈರ್ಯದ ಸಂಕೇತ. ಇದಕ್ಕೆ ತುಂಬು ತೋಳಿನ ಬಿಳಿ ಕುರ್ತಾ ಧರಿಸಿದ್ದರು.
2017ರಲ್ಲಿ ಕಡು ಕೆಂಪು ಮತ್ತು ಹಳದಿ ಮಿಶ್ರಿತ ಅದಕ್ಕೆ ಚಿನ್ನದ ಗೆರೆಯ ಲೇಪಿತ ಪೇಟಾ ತೊಟ್ಟಿದ್ದು ಅದಕ್ಕೆ ಬಂದ್ಗಾಲಾ ಅರ್ಧ ತೋಳಿನ ಕುರ್ತಾ ಧರಿಸಿದ್ದರು.
2016ರಲ್ಲಿ ಗುಲಾಬಿ ಮತ್ತು ಹಳದಿ ಮಿಶ್ರಿತ ಬಣ್ಣದ ಪೇಟಾ ಮತ್ತು ಬಿಳಿ ಬಣ್ಣದ ಅರ್ಧ ತೋಳಿದ ಚೆಕ್ಸ್ ಶರ್ಟ್ ಧರಿಸಿದ್ದರು.
2015ರ ಸ್ವಾತಂತ್ರ್ಯ ದಿನಾಚರಣೆ ಭಾಷಣದ ದಿನ ತಿಳಿ ಹಳದಿ ಬಣ್ಣ, ಅದಕ್ಕೆ ಮಿಶ್ರ ಬಣ್ಣದ ಗೆರೆಯ ವಿನ್ಯಾಸದ ಪೇಟಾವನ್ನು ಮೋದಿ ಜಾಕೆಟ್ ಎಂದೇ ಫೇಮಸ್ ಆಗಿರುವ ಜಾಕೆಟ್ ನ್ನು ಧರಿಸಿದ್ದರು.
2014ರಲ್ಲಿ ಪ್ರಧಾನಿಯಾದ ಮೊತ್ತ ಮೊದಲ ವರ್ಷ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ನರೇಂದ್ರ ಮೋದಿ ಗುಜರಾತಿನ ಸಾಂಪ್ರದಾಯಿಕ ನಾಗಾ ಪೇಟಾವನ್ನು ತೊಟ್ಟಿದ್ದರು.