ತಿರುಮಲ ಭೂ ಕುಸಿತದಿಂದ ಘಾಟ್ ರಸ್ತೆ ಸ್ಥಗಿತ, ಯಾತ್ರೆ ಮುಂದೂಡುವಂತೆ ಟಿಟಿಡಿ ಮನವಿ

ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಿರುಮಲದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Updated on
ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.

ತಿರುಮಲ ಬೆಟ್ಟಕ್ಕೆ ಹೋಗುವ ಹೆದ್ದಾರಿಯ ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಘಾಟ್ ನಂಬರ್ 2ರಲ್ಲಿ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ ತಿರುಪತಿಯಿಂದ ತಿರುಮಲಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಘಟನೆಯ ಸಮಯದಲ್ಲಿ ವಾಹನ ದಟ್ಟಣೆ ಇಲ್ಲದ ಕಾರಣ, ಅನಾಹುತ ತಪ್ಪ

ಇಂದು ಬೆಳಗ್ಗೆ 2ನೇ ಘಾಟ್‌ನ ಸಂಪರ್ಕ ರಸ್ತೆಯ ಬಳಿ ಸುಮಾರು ನಾಲ್ಕು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ವಾಹನಗಳು ಮೊದಲೇ ನಿಂತಿದ್ದರಿಂದ ಅನಾಹುತ ತಪ್ಪಿದೆ.

ಎರಡನೇ ಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಟಿಟಿಡಿ ಮೊದಲ ಘಾಟ್ ರಸ್ತೆಯಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಿದೆ. ಇದರಿಂದ ಅಲಿಪಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿರುವುದರಿಂದ ಯಾತ್ರಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇಂದು ಬೆಳಗಿನ ಜಾವ 05.45 ರ ಸುಮಾರಿಗೆ ತಿರುಮಲದತ್ತ ಪ್ರಯಾಣಿಸುತ್ತಿದ್ದ ಭಕ್ತರು ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯಾದಿಂದ ಬಚಾವ್ ಆಗಿದ್ದಾರೆ. ಬಸ್ ಬೆಟ್ಟದಲ್ಲಿ ಚಲಿಸುವಾಗ ಮೇಲಿನಿಂದ ಬಂಡೆ ಉರುಳುವ ಜೋರಾದ ಶಬ್ದ ಕೇಳಿತ್ತು. ಕೂಡಲೇ ಎಚ್ಚೆತ್ತ ಬಸ್ ಚಾಲಕ ಬಸ್ ಅನ್ನು ಅಲ್ಲಿಯೇ ನಿಲ್ಲಿಸಿದ್ದಾನೆ.

ಭೂ ಕುಸಿತ ವಿಚಾರ ತಿಳಿಯುತ್ತಲೇ ಘಟನಾ ಪ್ರದೇಶಕ್ಕೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರು ಅಧಿಕಾರಿಗಳ ಸಹಿತ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಟಿಟಿಡಿ ಇಂಜಿನಿಯರಿಂಗ್ ಅಧಿಕಾರಿಗಳು ಉರುಳಿದ ಬಂಡೆಗಳನ್ನು ತೆಗೆಯುಲು ದುರಸ್ತಿ ಕಾರ್ಯದ ಕುರಿತು ಸುಬ್ಬಾರೆಡ್ಡಿ ಅವರಿಗೆ ಮಾಹಿತಿ ನೀಡಿದರು.

ತಿರುಮಲದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಘಾಟ್ ರಸ್ತೆ ದುರಸ್ತಿ ಕಾರ್ಯ ಮುಂದುವರಿದಿರುವುದರಿಂದ ಸೀಮಿತ ಸಂಖ್ಯೆಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದುರಸ್ತಿಗೆ ಕೆಲವು ದಿನಗಳು ಹಿಡಿಯುವ ಸಾಧ್ಯತೆ ಇರುವುದರಿಂದ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ ದಿನಾಂಕ ಬದಲಿಸುವಂತೆ ಟಿಟಿಡಿ ಮನವಿ ಮಾಡುತ

ಆನ್ ಲೈನ್ ನಲ್ಲಿ ದರ್ಶನ ಟಿಕೆಟ್ ಪಡೆದ ಭಕ್ತರಿಗೆ ಇನ್ನು ಆರು ತಿಂಗಳ ಕಾಲ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಭಕ್ತರು ಒಂದಷ್ಟು ದಿನಗಳ ಕಾಲ ಯಾತ್ರೆ ಮುಂದೂಡಬಹುದು. ಅಲ್ಲದೆ ಪ್ರಸ್ತುತ ಬುಕ್ ಆಗಿರುವ ದರ್ಶನ ಟಿಕೆಟ್ ಗಳ ಕಾಲಾವಧಿಯನ್ನು ಆರು ತಿಂಗಳಿಗೆ ಏರಿಕೆ ಮಾಡಲಾಗಿದೆ.

ಅಧಿಕಾರಿಗಳು ತಿರುಪತಿಯಿಂದ ತಿರುಮಲಕ್ಕೆ ತೆರಳುವ ವಾಹನಗಳಿಗೆ ಒಂದು ಗಂಟೆ ಹಾಗೂ ತಿರುಮಲದಿಂದ ತಿರುಪತಿಗೆ ಬರುವ ವಾಹನಗಳಿಗೆ ಇನ್ನೊಂದು ಗಂಟೆ ಇದೇ ಘಾಟ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಿದ್ದಾರೆ.
ಅಧಿಕಾರಿಗಳು ತಿರುಪತಿಯಿಂದ ತಿರುಮಲಕ್ಕೆ ತೆರಳುವ ವಾಹನಗಳಿಗೆ ಒಂದು ಗಂಟೆ ಹಾಗೂ ತಿರುಮಲದಿಂದ ತಿರುಪತಿಗೆ ಬರುವ ವಾಹನಗಳಿಗೆ ಇನ್ನೊಂದು ಗಂಟೆ ಇದೇ ಘಾಟ್ ರಸ್ತೆಯಲ್ಲಿ ಅವಕಾಶ ಕಲ್ಪಿಸಲಿದ್ದಾರೆ.
ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.
ರಸ್ತೆ ಹಾಳಾಗಿದ್ದರಿಂದ ತಿರುಮಲಕ್ಕೆ ತೆರಳುವ ವಾಹನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ಸಂಚಾರಕ್ಕೆ ಅನುಮತಿ ಇಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com