ಬಿಜೆಪಿಯಲ್ಲಿ ಇಲ್ಲ ವಂಶಾಡಳಿತ

ನಮ್ಮ ಪಕ್ಷದಲ್ಲಿ `ನಾಯಕತ್ವ- ಅವಕಾಶ- ಅಧಿಕಾರ' ವಂಶಪಾರಂಪರ್ಯದ ಮೇಲೆ ಹಸ್ತಾಂತರವಾಗದು. ಕಾರ್ಯಕ್ಷಮತೆ...
ಅಮಿತ್ ಶಾ
ಅಮಿತ್ ಶಾ
Updated on

ಬೆಂಗಳೂರು: ನಮ್ಮ ಪಕ್ಷದಲ್ಲಿ `ನಾಯಕತ್ವ- ಅವಕಾಶ- ಅಧಿಕಾರ' ವಂಶಪಾರಂಪರ್ಯದ ಮೇಲೆ ಹಸ್ತಾಂತರವಾಗದು. ಕಾರ್ಯಕ್ಷಮತೆ ಹಾಗೂ ಸಾಮಥ್ರ್ಯದ ಆಧಾರದ ಮೇಲೆ ಎತ್ತರದ ಸ್ಥಾನ ಬಿಜೆಪಿಯಲ್ಲಿ ಸಿಗಲಿದೆ. ಇದಕ್ಕೆ ಮೋದಿ ಹಾಗೂ ತಾವೇ ಸಾಕ್ಷಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕಾರ್ಯಕರ್ತರಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, `ದೇಶದಲ್ಲಿ ಒಟ್ಟು 1600ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳಿದ್ದು, ಪ್ರಮುಖವಾಗಿ 15-20 ಪಕ್ಷಗಳನ್ನು ಗಣನೆಗೆ ತೆಗೆದುಕೊಂಡರೂ ಆಂತರಿಕ ಪ್ರಜಾಪ್ರಭುತ್ವವಿರುವುದು ಬಿಜೆಪಿಯಲ್ಲಿ ಮಾತ್ರ. ಸಾಮಾನ್ಯ ಕಾರ್ಯಕರ್ತನೂ ರಾಷ್ಟ್ರೀಯ ಅಧ್ಯಕ್ಷ ಹಾಗೂ  ಪ್ರಧಾನಿಯಾಗಬಹುದಾಗಿದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ' ಎಂದು ಉಲ್ಲೇಖಿಸಿದರು. ಪೂರ್ಣ ಬಹುಮತದೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜನತೆ ನಮಗೆ ಅಧಿಕಾರದ ಸಾಧನವನ್ನು ನೀಡಿದ್ದಾರೆ. ಅಲ್ಲದೇ 2014 ಬಿಜೆಪಿ ಪಾಲಿಗೆ ವಿಜಯ ವರ್ಷ.

ಅತಿ ಹೆಚ್ಚು ಶಾಸಕರು ಹಾಗೂ ಸಂಸದರನ್ನು ಹೊಂದಿರುವ ಪಕ್ಷ ಕಾಂಗ್ರೆಸ್ ಅಲ್ಲ, ಬಿಜೆಪಿ. ಅಲ್ಲದೆ, ಅತಿ ಹೆಚ್ಚಿನ ಸದಸ್ಯರನ್ನು ಹೊಂದಿದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯಾಗಿದೆ. ಒಟ್ಟು 12 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ, 8ರಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿದ್ದು, 4 ರಾಜ್ಯಗಳಲ್ಲಿ ಎನ್‍ಡಿಎ ಪಾಲುದಾರಿಕೆಯ ಸರ್ಕಾರಗಳಿವೆ. ಅತಿ ದೊಡ್ಡ ಡೇಟಾ ಬ್ಯಾಂಕ್(ಸದಸ್ಯತ್ವ ) ಹೊಂದಿದ್ದು, 10 ಕೋಟಿ ಸದಸ್ಯರನ್ನು ಮಾಡುವುದು ಕಡಿಮೆ ಸಾಧನೆಯಲ್ಲ. ಸಾಮಾನ್ಯವೂ ಅಲ್ಲ ಎಂದು ಬಣ್ಣಿಸಿದರು.

ಕೇರಳದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 14 ಲಕ್ಷ ಮತ ಪಡೆದಿತ್ತು, ಆದರೆ ಸದಸ್ಯತ್ವ ಅಭಿಯಾನದಲ್ಲಿ 19 ಲಕ್ಷ ಸದಸ್ಯರನ್ನು ಮಾಡಿದೆ. ಅಸ್ಸಾಂನಲ್ಲಿ ಹಿಂದಿನ ಸದಸ್ಯರ ಹತ್ತು ಪಟ್ಟು ಹೆಚ್ಚು ಸದಸ್ಯರನ್ನು ನೋಂದಾಯಿಸಲಾಗಿದೆ.ತಮಿಳುನಾಡಿನಲ್ಲೂ ಮತ ಗಳಿಕೆಗಿಂತ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಲಾಗಿದೆ. ಅನೇಕ  ರಾಜ್ಯಗಳಲ್ಲಿ 4-6 ಪಟ್ಟು ಹೆಚ್ಚಿನ ಸದಸ್ಯರನ್ನು ಮಾಡಲಾಗಿದೆ. ಈ ಪ್ರಯತ್ನಕ್ಕೆ ಕಾರ್ಯಕರ್ತರು ಅಭಿನಂದನಾರ್ಹರು ಎಂದರು. ಮುಂದಿನ ಭಾಗವಾಗಿ ಮಹಾಸಂಪರ್ಕ ಅಭಿಯಾನ ನಡೆಸಬೇಕಾಗಿದೆ. ಸದಸ್ಯರನ್ನು ಕಾರ್ಯಕರ್ತರನ್ನಾಗಿ ಪರಿವರ್ತನೆ ಮಾಡುವ ಹಾಗೂ  ಅರ್ಹರನ್ನು ಜನನಾಯಕರನ್ನಾಗಿ ಬೆಳೆಸುವ ಕೆಲಸ ಮಾಡಲಾಗುತ್ತದೆ.

ಪ್ರಶಿಕ್ಷಣ ವರ್ಗದ ಮೂಲಕ 15 ಲಕ್ಷ ಸಕ್ರಿಯ ಸದಸ್ಯರಿಗೆ ಸೈದ್ಧಾಂತಿಕ ಬದ್ಧತೆ, ಜನಪರ ಚಿಂತನೆ, ಸಾಮಾಜಿಕ ಚಿಂತನೆ, ಜನಪರ ಕಾರ್ಯಕರ್ತರನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು. ಅಂತ್ಯೋದಯ ನಮ್ಮ ಸಂಕಲ್ಪ, ಕಟ್ಟ ಕಡೆಯ ಬಡವನನ್ನು ದೃಷ್ಠಿಯಲ್ಲಿಟ್ಟುಕೊಂಡು ಅವನನ್ನು ಸ್ವಾಭಿಮಾನಿಯಾಗಿ, ಸ್ವಾವಲಂಭಿಯಾಗಿ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಕಾರ್ಯ ಕರ್ತರು ಜೊತೆಯಾಗಿ ಹೆಜ್ಜೆ ಹಾಕಬೇಕೆಂದರು.

ಬಿಜೆಪಿ ರೈತ ವಿರೋಧಿಯಲ್ಲ. ಬಿಜೆಪಿ ರೈತ ಸ್ನೇಹಿ, ಇದು ರೈತರ ಪಕ್ಷ, ರೈತರೇ ಅಧಿಕಾರ ನೀಡಿದ್ದಾರೆ, ಹೀಗಿರುವಾಗ ನಾವು ರೈತ ವಿರೋಧಿಯಾದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವೇ ಇಲ್ಲ.
- ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ
ಅಧ್ಯಕ್ಷ (ಭೂ ಸ್ವಾಧೀನ ವಿವಾದ ಕುರಿತು)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com