
ಬೆಂಗಳೂರು: ವಿಧಾನ ಪರಿಷತ್‍ನ ಟಿಕೆಟ್ ಹಂಚಿಕೆ ಗೊಂದಲದ ನಂತರ ಈಗ ಆಡಳಿತ ಮತ್ತು ಪ್ರತಿಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ.
ವಿಜಯಪುರ-ಬಾಗಲಕೋಟೆಯಲ್ಲಿ ಬಿಜೆಪಿ, ಕಾಂಗ್ರೆಸ್‍ನಿಂದ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ, ಮಂಗಳೂರಿನಲ್ಲಿ ಕಾಂಗ್ರೆಸ್‍ಗೆ ಡಬಲ್ ಬಂಡಾಯದ ಬಿಸಿ ತಟ್ಟಿದೆ. ಮಂಡ್ಯದಲ್ಲಿ ಶಿವರಾಮೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಆ ಪಕ್ಷದ ಜಿಲ್ಲಾ ನಾಯಕರಿಗೆ ಅಸಮಾಧಾನ ಉಂಟು ಮಾಡಿದೆ.
ಬಿಜೆಪಿಗೆ ಯತ್ನಾಳ್ ಭಯ: ವಿಜಯಪುರ, ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರ. ಆದರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಲಾ ಒಬ್ಬೊಬ್ಬ ಅಭ್ಯರ್ಥಿಗಳನ್ನಷ್ಟೇ ಕಣಕ್ಕಿಳಿಸಿದೆ. ಎಂದಿನಂತೆ ಈ ಬಾರಿಯೂ ಎಲ್ಲ ಅಭ್ಯರ್ಥಿಗಳೂ ಬಾಗಲಕೋಟೆಯವರೇ. ಈ ಬಾರಿ ಎರಡು ಸ್ಥಾನಕ್ಕೂ ಅಭ್ಯರ್ಥಿಗಳನ್ನುಹಾಕಬೇಕು, ಬಾಗಲಕೋಟೆಯಿಂದ ನ್ಯಾಮಗೌಡ ಅವರಿಗೆ, ವಿಜಯಪುರ ಭಾಗದಿಂದ ತಮಗೆ ಟಿಕೆಟ್ ಕೊಡಬೇಕೆಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ರಾಜ್ಯ ನಾಯಕರಿಗೆ ಆಗ್ರಹಿಸುತ್ತಲೇ ಬಂದಿದ್ದರು. ಆದರೆ, ಬಿಜೆಪಿ ಬಾಗಲಕೋಟೆಯ ಜಿ.ಎಸ್.ನ್ಯಾಮಗೌಡರ ನ್ನು ಏಕೈಕ ಅಭ್ಯರ್ಥಿಯನ್ನಾಗಿ ಅಖೈರುಗೊಳಿಸಿ, ಯತ್ನಾಳ್‍ಗೆ ಟಿಕೆಟ್ ನಿರಾಕರಿಸಿದೆ. ಇದರಿಂದ ಅಸಮಾಧಾನಗೊಂಡ ಯತ್ನಾಳ್ ಸೋಮವಾರ ತಾವೂ ಬಿಜೆಪಿ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿದ್ದಾರೆ.
ಹೀಗಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಜಿ. ಎಸ್. ನ್ಯಾಮಗೌಡ ಸೋಮವಾರ ಮತ್ತೆ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಡಿ.9ರವರೆಗೆ ಕಾದು ನೋಡಿ, ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಯತ್ನಾ ಳ್ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಕೂಡ ಬಾಗಲಕೋಟೆ ಮೂಲಕ ಎಸ್.ಆರ್.ಪಾಟೀಲ ಅವರಿಗೆ ಟಿಕಟೆ ಕೊಟ್ಟು ಇದರಿಂದಾಗಿ ಆ ಪಕ್ಷದಲ್ಲೂ ಟಿಕೆಟ್ ಹಂಚಿಕೆ ಅಸಮಾಧಾನ ಬೂದಿ ಮುಚ್ಚಿ ಕೆಂಡದಂತಿದೆ. ಕಾಂಗ್ರೆಸ್ ಮುಖಂಡ ಮಲ್ಲಿ ಕಾರ್ಜುನ ಲೋಣಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮ ಂಗಳ ವಾರ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.ಹೆಗ್ಡೆ ಬಂಡಾಯದ ಬಾವುಟ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಜಯಪ್ರಕಾಶ್ ಹೆಗ್ಡೆ ಅವರೇ ಬಂಡಾಯದ ಭಾವುಟ ತೋರಿದ್ದಾರೆ.
ಹಾಲಿ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು ಹಿಂದಿನಿಂದಲೂ ಈ ಬಾರಿ ತಿಮಗೆ ಟಿಕೆಟ್ ಬೇಡ ಎನ್ನುತ್ತಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಮರಳಿ ಅವರಿಗೇ ಟಿಕೆಟ್ ಸಿಕ್ಕಿದೆ. ಇದರಿಂದ ಅಸಮಾಧಾನಗೊಂಡಿರುವ ಜಯಪ್ರಕಾಶ್ ಹೆಗ್ಡೆ ತಾವು ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರ ಜತೆಗೆ, ಕೆಪಿಸಿಸಿ ಸದಸ್ಯ ಭುಜಂಗ ಶೆಟ್ಟಿ ಅವರೂ ಬಂ ಡಾಯವೆದ್ದು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿ ಎಸ್‍ನಲ್ಲೂ ಅಸಮಾಧಾನದ ಹೊಗೆಯಾಡುತ್ತಿದ್ದರು, ಎ.ಎಂ ಇಸ್ಮಾಯಿಲ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಶಿವರಾಮೇಗೌಡರ ವಿರುದ್ಧ ಮುನಿಸು
``ಲೋಕಸಭೆ ಚುನಾವಣೆಯಲ್ಲಿ ರಮ್ಯಾರನ್ನು ಸೋಲಿಸಿದ್ದು ತಾವೇ ಎಂದು ಹೇಳಿಕೊಂಡರು, ಪಕ್ಷ ಬಿಟ್ಟು ಹಲವು ಬಾರಿ ಹೊರ ಹೋದರು. ಅಷ್ಟೇ ಏಕೆ ಅವರು ಈ ಸಂದರ್ಭಕ್ಕೆ ಕಾಂಗ್ರೆಸ್‍ನ ಸದಸ್ಯರೂ ಅಲ್ಲ. ಅಂಥವರನ್ನು ಬೆಂಬಲಿಸುವ ಅನಿವಾರ್ಯತೆ ಇಲ್ಲ,'' ಹೀಗೆಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಕಿಡಿ ಕಾರಿದ್ದು, ಅವರದೇ ಪಕ್ಷದ ರವೀಂದ್ರ ಶೀಕಂಠಯ್ಯ. ಈ ಕುರಿತು ಅವರು ವರಿಷ್ಠರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‍ಗೆ ಬಂಡಾಯವಿಲ್ಲ. ಆದರೆ, ಅಭ್ಯರ್ಥಿ ವಿಚಾರದಲ್ಲಿ ಗೊಂದಲ ಮೂಡಿದೆ. ಇದು ಕಾಂಗ್ರೆಸ್‍ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
Advertisement