ನನ್ನ ಯಾವುದೇ ಕೆಲಸಗಳಿಗೆ ಕಾಂಗ್ರೆಸ್ ನಿಂದ ಮೆಚ್ಚುಗೆಯಿಲ್ಲ: ಶಶಿ ತರೂರ್

ನನ್ನ ಒಳ್ಳೆಯ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಮೆಚ್ಚುಗೆ, ಪ್ರಶಂಸೆ ಸಿಗುತ್ತಿಲ್ಲ ಎಂದು ಸಂಸದ ಶಶಿ ತರೂರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ....
ಶಶಿ ತರೂರ್
ಶಶಿ ತರೂರ್
Updated on: 

ನವದಹೆಲಿ: ವಿವಾದಗಳಿಗೂ ಸಂಸದ ಶಶಿ ತರೂರ್ ಗೂ ಎಲ್ಲಿಲ್ಲದ ನಂಟು. ನನ್ನ ಒಳ್ಳೆಯ ಕೆಲಸಗಳಿಗೆ ಕಾಂಗ್ರೆಸ್ ಪಕ್ಷದಿಂದ ಯಾವುದೇ ಮೆಚ್ಚುಗೆ, ಪ್ರಶಂಸೆ ಸಿಗುತ್ತಿಲ್ಲ ಎಂದು ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.

 ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ಅವರು ಪಕ್ಷದ ಬಗೆಗಿನ ತನ್ನ ವಿಧೇಯತೆ ಕಾಳಜಿಯನ್ನೂ ಯಾರೂ ಗಮನಿಸುತ್ತಿಲ್ಲ ಎಂದಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಸಂಸದರ ಸಭೆಯಲ್ಲಿ ನಡೆಸಿದ ಗಂಭೀರ ವಿಷಯಗಳು ಶಶಿ ತರೂರ್ ಅವರಿಂದ ಸೋರಿಕೆಯಾಗುತ್ತಿವೆ ಎಂದು ಸೋನಿಯಾ ಗಾಂಧಿ ತರೂರ್ ವಿರುದ್ಧ ಕಿಡಿ ಕಾರಿದ್ದರು. ಈ ವಿಷಯದ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಿರುವ ತರೂರ್, ನಿಮ್ಮ ಹೇಳಿಕೆಗಳು ಕಪೋಲ ಕಲ್ಪಿತವಾಗಿವೆ ಎಂದು ತಿಳಿಸಿದ್ದಾರೆ.

ಇನ್ನು ಪಕ್ಷದಿಂದ ನನ್ನನ್ನು ಪ್ರತ್ಯೇಕವಾಗಿಡಲಾಗುತ್ತಿದೆ. ಇದೆಲ್ಲಾ ಕೆಲವರ ಚಿತಾವಣೆ ಎಂದು ಸಹ ಆರೋಪಿಸಿದ್ದಾರೆ. ಪಕ್ಷದ ವಿರುದ್ದವಾಗಿ ನಾನು ಯಾವುದೇ ಕೆಲಸ ಮಾಡಿಲ್ಲ. ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ನಾನು ಎಂದಿರುವ ತರೂರ್, ಪಕ್ಷದ ಪರವಾಗಿ ನಾನು ಮಾಡುವ ಯಾವುದೇ ಕೆಲಸವನ್ನು ಕಾಂಗ್ರೆಸ್ ಗುರುತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com