ಬಾಂಧವ್ಯ ಕೊರತೆ ಮೂಡಿಸಿದೆ ಶಂಕೆ: ಎಚ್‍ಡಿಕೆ

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಬಾಂಧವ್ಯ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಸರ್ಕಾರದಲ್ಲಿ ದೊಡ್ಡ ಲೋಪಗಳಿರುವ ಶಂಕೆ ಮೂಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಬಾಂಧವ್ಯ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಸರ್ಕಾರದಲ್ಲಿ ದೊಡ್ಡ ಲೋಪಗಳಿರುವ ಶಂಕೆ ಮೂಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳನ್ನೂ ರಾಜ್ಯಪಾಲ ವಿ.ಆರ್. ವಾಲಾ ಅವರು ವಾಪಸ್ ಕಳುಹಿಸುತ್ತಿದ್ದಾರೆ. ಹಾಗೆಯೇ ಈಗ ಕುಲಪತಿಗಳ ನೇಮಕ ವಿಚಾರದಲ್ಲಿ ಅವರು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಅಂದರೆ ಸರ್ಕಾರದ ತೀರ್ಮಾನಗಳಿಗೆ ರಾಜ್ಯಪಾಲರು ಸಹಮತ ನೀಡುತ್ತಿಲ್ಲ ಎನ್ನುವುದು ಇಲ್ಲಿ ವ್ಯಕ್ತವಾಗುತ್ತದೆ. ಕೆಪಿಎಸ್‍ಎಸ್ಸಿಗೆ ಹೊಸ ನೇಮಕ, ಬಿಬಿಎಂಪಿ ವಿಭಜನೆ- ಹೀಗೆ ಅನೇಕ ತೀರ್ಮಾನಗಳನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.

ಅಂದರೆ ಸರ್ಕಾರ ಕೈಗೊಂಡ ತೀರ್ಮಾನಗಳು ಸರಿಯಾಗಿಲ್ಲ ಎಂದರ್ಥ. ಇಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ವಿಶ್ವಾಸದ ಕೊರತೆ ಇರುವುದು ಎದ್ದುಕಾಣುತ್ತಿದೆ ಎಂದು ಕುಮಾರ ಸ್ವಾಮಿ ಹೇಳಿದರು. ಲೋಕಾ ಯುಕ್ತದಲ್ಲೇ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅಲ್ಲಿನ ಹಿರಿಯ ಅಧಿಕಾರಿಯೇ ಪತ್ರ ಬರೆದಿದ್ದಾರೆ. ಈ ಸಂಸ್ಥೆ ಮೇಲೆ ನಂಬಿಕೆ ದೂರವಾಗುತ್ತಿದೆ. ಇಷ್ಟೆಲ್ಲಾ ಆದರೂ ಸರ್ಕಾರ ಮೌನವಹಿಸಿದ್ದು, ಕೇವವ ಸಣ್ಣ ಅಧಿಕಾರಿಗಳನ್ನು ಮಾತ್ರ ಶಿಕ್ಷಿಸಿ ಏನೂ ಆಗಿಯೇ ಇಲ್ಲ ಎಂದು ಮರೆ ಮಾಡುತ್ತಿದೆ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com