ವಿಧಾನಸಭೆಯೊಳಗೆ ಸಾರಾಯಿ ಘಮಲು

ಹೊರಗೆ ರೈತರ ಬೃಹತ್ ಪ್ರತಿಭಟನೆಗೆ ಕಾರಣವಾಗಿದ್ದ ಸಕ್ಕರೆ ಮಂಗಳವಾರ ವಿಧಾನಸಭೆಯೊಳಗೆ ಸಾರಾಯಿ ಘಮಲು ಹುಟ್ಟಿಸಿತ್ತು...
ವಿಧಾನಸಭೆ ಅಧಿವೇಶನ
ವಿಧಾನಸಭೆ ಅಧಿವೇಶನ
Updated on: 

ವಿಧಾನಸಭೆ: ಹೊರಗೆ ರೈತರ ಬೃಹತ್ ಪ್ರತಿಭಟನೆಗೆ ಕಾರಣವಾಗಿದ್ದ ಸಕ್ಕರೆ ಮಂಗಳವಾರ ವಿಧಾನಸಭೆಯೊಳಗೆ ಸಾರಾಯಿ ಘಮಲು ಹುಟ್ಟಿಸಿತ್ತು.

ಸಕ್ಕರೆ ಬಾಕಿ ಕುರಿತು ಮುಂದುವರಿದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಥೆನಾಲ್, ಮೊಲ್ಯಾಸಿಸ್, ವಿದ್ಯುತ್ ಇತ್ಯಾದಿ ಉಪ ಉತ್ಪನ್ನಗಳ ಬಗ್ಗೆ ಪ್ರಸ್ತಾಪಿಸುತ್ತಾ, ಸರ್ಕಾರ ವಶಪಡಿಸಿಕೊಂಡಿರುವ ಸಕ್ಕರೆಗೆ ಉತ್ತಮ ದರವೂ ಸಿಗುತ್ತಿಲ್ಲ ಎಂದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, `ರೇಟು ಸಿಗುವುದಿಲ್ಲಾ ಅಂದ್ಮೇಲೆ ಸಾರಾಯಿನಾದ್ರೂ ಮಾಡಿದರೆ ಹೇಗೆ' ಎಂದು ಪ್ರಶ್ನಿಸಿದರು.

ಇದಕ್ಕೆ ವಿವರಣೆ ನೀಡಿದ ಬಿಜೆಪಿ ಶಾಸಕ ಲಕ್ಮಣ ಸವದಿ, `ಇಲ್ಲಾ ಸಾರ್, ಸಕ್ಕರೆಯಿಂದ ಸಾರಾಯಿ ಆಗುವುದಿಲ್ಲ. ಕಬ್ಬು ನುರಿಸುವಾಗ ಸಿಗುವ ಮೊಲ್ಯಾಸಿಸ್‍ನಿಂದ ಸಾರಾಯಿ ತಯಾರಾಗುತ್ತದೆ' ಎನ್ನುವ ವಿವರಣೆ ನೀಡಿದರೆ, ಅವರ ಪಕ್ಕದಲ್ಲೇ ಇದ್ದ ಶಾಸಕ ಸಿ.ಟಿ.ರವಿ `ರೈತರಿಗೆ ಬಾಕಿ ಭಾಗ್ಯ ನಿಮ್ಮಿಂದ ಅಸಾಧ್ಯ, ಸಾರಾಯಿ ಭಾಗ್ಯವನ್ನಾದರೂ ಕರುಣಿಸಿ' ಎಂದು ಸದನದಲ್ಲಿದ್ದ ಮುಖ್ಯಮಂತ್ರಿಗಳ ಕಾಲೆಳೆದರು. ಕೆ.ಎಸ್. ಪುಟ್ಟಣ್ಣಯ್ಯ ಮತ್ತಿತರರು ಚರ್ಚೆ ಇದೇ ಧಾಟಿಯಲ್ಲಿ ಚರ್ಚೆ ಮುಂದುವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com