
ವಿಧಾನಸಭೆ: ಅಧಿವೇಶನದ ಕೊನೆಯ ಕ್ಷಣದಲ್ಲಿ ವಿಧೇಯಕಗಳನ್ನು ತಂದು ಅನುಮೋದನೆಗೆ ಕೇಳುತ್ತೀರಿ, ನಾನೇನು ಮಾಡಲು ಸಾಧ್ಯ? ಎಲ್ಲ ಶಾಸಕರು ಚರ್ಚೆಗೆ ಅವಕಾಶ ಕೇಳುತ್ತಾರೆ ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷಾ ಕಲಿಕೆ ಹಾಗೂ ಭಾಷಾ ಮಾಧ್ಯಮದಂತಹ ವಿಚಾರ ಒಳಗೊಂಡ ವಿಧೇಯಕವನ್ನು ಕೊನೆಕ್ಷಣದಲ್ಲಿ ಮಂಡಿಸುತ್ತಿದ್ದೀರಿ. ಪ್ರತಿಯೊಬ್ಬ ಶಾಸಕರು ಚರ್ಚೆಗೆ ಅವಕಾಶ ಕೇಳುತ್ತಾರೆ. ಇಂಥ ಪ್ರಮುಖ ವಿಧೇಯಕಗಳನ್ನು ಮೊದಲೇ ಮಂಡಿಸಲು ಏಕೆ ಹಿಂಜರಿಯುತ್ತೀರಿ ಎಂದು ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸ್ಪೀಕರ್ ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕಲಾಪ ಸಲಹಾ ಸಮಿತಿಯಲ್ಲಿ ಒಪ್ಪಿಗೆ ಸೂಚಿಸದ ವಿಧೇಯಕಗಳನ್ನು ಅಂತಿಮ ಕ್ಷಣದಲ್ಲಿ ಮಂಡಿಸಬಾರದು. ಆದರೆ, ರಾಜ್ಯ ಸರ್ಕಾರ ಇದನ್ನು ಪಾಲಿಸುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿ ಇರುವ ವಿಧೇಯಕಗಳನ್ನು ತರಾತುರಿಯಲ್ಲಿ ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಸೋಮವಾರ ಅಂಗೀಕಾರಗೊಂಡ ವಿಧೇಯಕ
ಕರ್ನಾಟಕ ಧನವಿನಿಯೋಗ ವಿಧೇಯಕ
ಕರ್ನಾಟಕ ಮೌಲ್ಯವರ್ಧಿತ ತೆರಿಗೆ ತಿದ್ದುಪಡಿ ವಿಧೇಯಕ
ಕರ್ನಾಟಕ ತೆರಿಗೆ ಕಾನೂನುಗಳ ತಿದ್ದುಪಡಿ ವಿಧೇಯಕ
ಕರ್ನಾಟಕ ಸ್ಟ್ಯಾಂಪು ತಿದ್ದುಪಡಿ ವಿಧೇಯಕ
ಕರ್ನಾಟಕ ಸ್ಟ್ಯಾಂಪು ಎರಡನೇ ತಿದ್ದುಪಡಿ ವಿಧೇಯಕ
ನೋಂದಣಿ ತಿದ್ದುಪಡಿ ವಿಧೇಯಕ
ಕರ್ನಾಟಕ ವಿಧಾನಮಂಡಲದವರ ಸಂಬಳ, ನಿವೃತ್ತ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ
ಕರ್ನಾಟಕ ಸಚಿವರುಗಳ ಸಂಬಳ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವಗ್ವಾಣೆ ನಿಯಂತ್ರಣ ತಿದ್ದುಪಡಿ ವಿಧೇಯಕ
ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ, ನಿಯಂತ್ರಣ ವಿಧೇಯಕ
Advertisement