ಕ್ರೀಡಾಪಟುಗಳಿಗೆ ಮೀಸಲು ಯೋಚಿಸಿ ನಿರ್ಧಾರ:ಸಿಎಂ

ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ವಿಧಾನ ಪರಿಷತ್ : ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಕಲ್ಪಿಸುವ ಬಗ್ಗೆ ಯೋಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಬಿಜೆಪಿಯ ಜಿ.ಎಸ್. ನ್ಯಾಮಗೌಡ ಪರವಾಗಿ ಅರುಣ್ ಶಹಾಪುರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನೇಮಕಾತಿ ಮೀಸಲಾತಿ ನೀಡುವ ಬಗ್ಗೆ ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ. ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಈ ಮಾದರಿ ಅನುಸರಿಸುವ ಮಾಹಿತಿಯಿದ್ದು, ಉಳಿದ ರಾಜ್ಯಗಳಿಂದಲೂ ಮಾಹಿತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಇದಕ್ಕೆ ತೃಪ್ತರಾಗದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಯಾವಾಗ ಕೇಳಿದರು ಪರಿಶೀಲಿಸುತ್ತೇನೆ ಎನ್ನುತ್ತೀರಾ. ನಿಮ್ಮ ಬಳಿ ಬೇರೆ ಉತ್ತರವಿಲ್ಲವಾ? ಎಂದು ತರಾಟೆ ತೆಗೆದುಕೊಂಡರು. ಹಾಗಾದರೆ, ಪರಿಶೀಲಿಸುತ್ತೇನೆ ಎಂಬುದಕ್ಕೆ ಪರ್ಯಾಯ ಪದ ಹೇಳಿ ಎಂದು ಸಿಎಂ ಮರುಪ್ರಶ್ನೆ ಎಸೆದರು.

ಈಶ್ವರಪ್ಪ ಅವರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ, ಪರಿಶೀಲಿಸುತ್ತೇನೆ ಎನ್ನುವ ಬದಲು ಚಿಂತಿಸಿ, ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬ ಪದ ಬಳಸುವುದಾಗಿ ಸಿಎಂ ಸದನಕ್ಕೆ ಸ್ಪಷ್ಟನೆ ನೀಡಿದಾಗ ಸದನ ಕೆಲಕಾಲ ನಗೆಗಡಲಲ್ಲಿ ತೇಲಿತು.

ಸಕಾಲ ಗುಣಮಟ್ಟ ಮೌಲ್ಯಮಾಪನಕ್ಕೆ ಚಿಂತನೆ: ಸಕಾಲ ಯೋಜನೆಯಲ್ಲಿ ಇತ್ಯರ್ಥಪಡಿಸಿರುವ ಅರ್ಜಿಗಳ ಸಾಫಲ್ಯತೆ ಮತ್ತು ಗುಣಮಟ್ಟವನ್ನು ಮತ್ತೊಮ್ಮೆ ಮೌಲ್ಯಮಾಪನ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com