ಅಂಬೇಡ್ಕರ್ ಬೌದ್ಧಧರ್ಮ ಸ್ವೀಕರಿಸಲು ಕಾಂಗ್ರೆಸ್ ಕುತಂತ್ರ ಕಾರಣ: ಎಚ್ ಡಿ ದೇವೇಗೌಡ

ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಕಾಂಗ್ರೆಸ್ ನ ಕುತಂತ್ರವೇ ಕಾರಣ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ...
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)

ಬೆ೦ಗಳೂರು: ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ಕಾಂಗ್ರೆಸ್ ನ ಕುತಂತ್ರವೇ ಕಾರಣ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ  ಹೇಳಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ  ಜೆಡಿಎಸ್ ಪಕ್ಷದ ವತಿಯಿ೦ದ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅ೦ಬೇಡ್ಕರ್ ಅವರ 125 ನೇ ಜನ್ಮದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಬಾಬು  ಜಗಜೀವನರಾ೦ ಅವರ 109ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ದೇವೇಗೌಡ ಅವರು, "ಅ೦ಬೇಡ್ಕರ್ 2 ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ 2 ಬಾರಿಯೂ ಅವರು  ಚುನಾವಣೆಯಲ್ಲಿ ಸೋಲುವಂತಾಯಿತು. ಇದಕ್ಕೆ ಕಾಂಗ್ರೆಸ್ ಪಕ್ಷದ ಕುತಂತ್ರ ರಾಜಕಾರಣವೇ ಕಾರಣ. ಹೀಗಾಗಿಯೇ ಅಂಬೇಡ್ಕರ್ ಜಿಗುಪ್ಸೆಗೊ೦ಡು ಬೌದ್ಧ ಧರ್ಮಕ್ಕೆ ಮತಾ೦ತರಗೊಳ್ಳುವ೦ತಾಯಿತು ಎ೦ದು ಹೇಳಿದರು.

ಅಲ್ಲದೆ ಭಾರತಕ್ಕೆ ಸಂವಿಧಾನ ಬರೆದುಕೊಟ್ಟ ಅ೦ಬೇಡ್ಕರ್ ಸಾಧನೆಯನ್ನು ಗುರುತಿಸಲು ಮತ್ತು ಅವರಿಗೆ "ಭಾರತರತ್ನ" ನೀಡಲು ಕಾ೦ಗ್ರೆಸ್ಸೇತರ ಪ್ರಧಾನಿಯೇ ಬರಬೇಕಾಯಿತು. ವಿ.ಪಿ. ಸಿ೦ಗ್  ಪ್ರಧಾನಿಯಾಗಿದ್ದಾಗ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಅ೦ಬೇಡ್ಕರ್ ಹಾಗೂ ಬಾಬು ಜಗಜೀವನರಾ೦ ಅವರನ್ನು ಕಾ೦ಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ತುಳಿತಕ್ಕೊಳಗಾದ  ಹಾಗೂ ಶೋಷಿತ ಸಮುದಾಯಗಳಿಗೆ ಈ ಇಬ್ಬರು ನಾಯಕರು ಸ್ಥಾನಮಾನ ಕಲ್ಪಿಸಿದರು ಎ೦ದು ಎಚ್ ಡಿ ದೇವೇಗೌಡ ಹೇಳಿದರು.

ಬಾಂಗ್ಲಾ ಯುದ್ಧದ ಶ್ರೇಯಸ್ಸು ಜಗಜೀವನರಾ೦ಗೆ ಸಿಗಬೇಕಿತ್ತು
ಇದೇ ವೇಳೆ ಬಾಬು ಜಗಜೀವನ್ ರಾಂ ರನ್ನು ನೆನೆಯುತ್ತ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, " ಬಾಬು ಜಗಜೀವನರಾ೦ ರಕ್ಷಣಾ ಸಚಿವರಾಗಿದ್ದಾಗ ಬಾ೦ಗ್ಲಾದೇಶದ  ಮೇಲೆ ನಡೆದ ಯುದ್ಧವನ್ನು ಭಾರತ ಗೆದ್ದಿತು. ಆದರೆ, ಅದರ ಸ೦ಪೂಣ೯ ಶ್ರೇಯಸ್ಸು ಆಗ ಪ್ರಧಾನಿಯಾಗಿದ್ದ ಇ೦ದಿರಾಗಾ೦ಧಿಗೆ ಸಲ್ಲುವ೦ತಾಯಿತು. ಅವರ ಪಕ್ಕದಲ್ಲೇ ಜಗಜೀವನರಾ೦ ಇದ್ದರೂ ಅವರನ್ನು ನೆನೆಯುವ ಕೆಲಸ ಯಾರೂ ಮಾಡಲಿಲ್ಲ ಎ೦ದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಡಾ. ಅನ್ನದಾನಿ, ಶಾಸಕ ಗೋಪಾಲಯ್ಯ, ಪಕ್ಷದ ಕಾಯಾ೯ಧ್ಯಕ್ಷ ನಾರಾಯಣ ರಾವ್, ಉಪಮೇಯರ್ ಹೇಮಲತಾ, ಪಾಲಿಕೆ ಸದಸ್ಯೆ  ಮ೦ಜುಳಾ ನಾರಾಯಣಸ್ವಾಮಿ ಮತ್ತಿತರರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com