ಬೆಂಗಳೂರು: ಬಹುತೇಕ ಸಚಿವರು ಮತ್ತು ಸಚಿವ ಸ್ಥಾನ ಆಕಾಂಕ್ಷಿಗಳು ಬರ ಪ್ರವಾಸಕ್ಕಿಂತ ಸಚಿವ ಸಂಪುಟ ವಿಸ್ತರಣೆ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆಂದು ತಿಳಿದು ಬಂದಿದೆ.
ಬಹುತೇಕ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಭೇಟಿಯ ಕಡೆಗೆ ಗಮನ ಹರಿಸಿದ್ದು, ಸಿದ್ದರಾಮಯ್ಯ ಅವರೊಂದಿಗೆ ದೆಹಲಿಗೆ ಭೇಟಿ ನೀಡಲು ಸಿದ್ಧರಿದ್ದಾರೆಂದು ತಿಳಿದು ಬಂದಿದೆ.
ನಾಯಕತ್ವ ಬದಲಾವಣೆ ಕಾತುರರಾಗಿರುವ ಕೆಲ ಶಾಸಕರು ಬರ ಪ್ರವಾಸದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಪರಮೇಶ್ವರ್ ಅವರು ಮತ್ತೆ ದಲಿತ ಸಿಎಂ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಈಗಾಗಲೇ, ಎಸಿಬಿ ರಚನೆ ಮತ್ತು ಮ್ಯಾಟ್ರಿಕ್ಸ್ ಲ್ಯಾಬ್ ಪ್ರಕರಣಗಳಿಂದ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಪಕ್ಷದೊಳಗೇ ಬಿರುಕು ಹೆಚ್ಚಾಗಿದೆ.