
ಬೆ೦ಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣಕ್ಕೆ ಮತ್ತೊಂದು ತಿರುವು ಲಭಿಸಿದ್ದು, ಅದು ಕಳವಾಗಿರುವ ವಾಚಲ್ಲ ಎಂದು ಡಾ.ಸುಧಾಕರ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ಸಂಬಂಧ ಸೋಮವಾರ ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಅವರನ್ನು ಭೇಟಿ ಮಾಡಿದ್ದ ಸುಧಾಕರ್ ಶೆಟ್ಟಿ ಅವರು ತಮ್ಮ ದೂರಿನ ಸಂಬಂಧ ಮಾಹಿತಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಶೆಟ್ಟಿ ಅವರು, ಸಿಎ೦ ಸಿದ್ದರಾಮಯ್ಯ ಕಟ್ಟಿರುವ ವಾಚಿಗೂ ಮತ್ತು ಕಳವಾಗಿರುವ ತಮ್ಮ ವಾಚ್‍ಗಳಿಗೂ ಯಾವುದೇ ಸ೦ಬ೦ಧ ಇಲ್ಲ. ವಾಚ್‍ಗಳು ಬೇರೆ ಬೇರೆ ಕ೦ಪನಿಗಳಿಗೆ ಸೇರಿದ್ದಾಗಿದ್ದು ಎಂದು ಅವರು ಸ್ಪಷ್ಟಪಡಿಸಿದರು.
"2015ರ ಮೇ 7ರ೦ದು ದಾಖಲಿಸಿರುವ ಪ್ರಕರಣವನ್ನು ಆಧರಿಸಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸಿಎ೦ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ನಾನು ಕಳೆದುಕೊ೦ಡಿರುವುದು 2 ರೋಲೆಕ್ಸ್ ಮತ್ತು 1 ಶೇಫಡ್‍೯ ಕ೦ಪನಿ ವಾಚುಗಳು. ಸಿದ್ದರಾಮಯ್ಯ ಕೈಯಲ್ಲಿರುವ ವಾಚ್ ಕ೦ಪನಿಯೇ ಬೇರೆ. ಏತಕ್ಕಾಗಿ ನನ್ನ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ ಅದರ ಹಿಂದಿನ ಉದ್ದೇಶವೇನು ಎಂದು ನನಗೆ ತಿಳಿಯುತ್ತಿಲ್ಲ ಪ್ರಕರಣದ ಸ೦ಬ೦ಧ ಪೊಲೀಸ್ ಆಯುಕ್ತರ ಜತೆ ಚಚೆ೯ ನಡೆಸಿದ್ದು, ತನಿಖೆ ಮು೦ದುವರಿದಿರುವುದಾಗಿ ಅವರು ಮಾಹಿತಿ ಕೊಟ್ಟಿದ್ದಾರೆ ಎ೦ದು ಸುಧಾಕರ್ ಶೆಟ್ಟಿ ಅವರು ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಅವರು, ಸಿಎಂ ಸಿದ್ದರಾಮಯ್ಯ ಅವರ ಬಳಿ ಇರುವ ವಾಚಿಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಸುಧಾಕರ್ ಶೆಟ್ಟಿ ಖುದ್ದಾಗಿ ಮಾಹಿತಿ ನೀಡಿದ್ದಾರೆ. ಅವರ ಮನೆಯಲ್ಲಿ ವಾಚು ಮತ್ತು ಇನ್ನಿತರ ವಸ್ತುಗಳು ಕಳವಾದ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮು೦ದುವರಿದಿದೆ ಎಂದು ಹೇಳಿದರು.
Advertisement