ಯಡಿಯೂರಪ್ಪ-ಈಶ್ವರಪ್ಪ ನಡುವಿನ ಭಿನ್ನಮತ ಶಮನಕ್ಕೆ ಅಮಿತ್ ಶಾ ಸಾರಥ್ಯ

ರಾಜ್ಯ ಬಿಜೆಪಿಯಲ್ಲಿ ರಾಮ-ಲಕ್ಷ್ಮಣ ಎಂದೇ ಗುರುತಿಸಿಕೊಂಡಿದ್ದ ಬಿಎಸ್ ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಬಿಕ್ಕಟ್ಟು ...
ಯಡಿಯೂರಪ್ಪ ಅಮಿತ್ ಶಾ ಮತ್ತು ಈಶ್ವರಪ್ಪ
ಯಡಿಯೂರಪ್ಪ ಅಮಿತ್ ಶಾ ಮತ್ತು ಈಶ್ವರಪ್ಪ
Updated on: 

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಮ-ಲಕ್ಷ್ಮಣ ಎಂದೇ ಗುರುತಿಸಿಕೊಂಡಿದ್ದ ಬಿಎಸ್ ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಬಿಕ್ಕಟ್ಟು ಬಗೆ ಹರಿಸಲು ಅಮಿತ್ ಶಾ ಸಂಧಾನ ಸಭೆ ಕರೆದಿದ್ದಾರೆ.

ದೆಹಲಿಯಲ್ಲಿ ಇಂದು ಸಂಜೆ ನಡೆಯವ ಸಂಧಾನ ಸಭೆಯಲ್ಲಿ ಇಬ್ಬರು ಯಡಿಯೂರಪ್ಪ ಮತ್ತು ಈಶ್ವರಪ್ಪ ಪರಸ್ಪರ ದೂರು ನೀಡಲಿದ್ದಾರೆ. ರಾಜ್ಯ ಬಿಜೆಪಿ ವಿದ್ಯಮಾನಗಳ ಬಗ್ಗೆ ಅಮಿತ್ ಶಾ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ.

ಇಬ್ಬರು ಹಿರಿಯ ನಾಯಕರುಗಳ ನಡುವಿನ ಕಿತ್ತಾಟವನ್ನು ಅಂತ್ಯಗೊಳಿಸಿ, ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುವಂತೆ ಅಮಿತ್ ಶಾ ಇಬ್ಬರ ಮನವೊಲಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.

ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವರನ್ನು ರಾಜಿ ಸಂಧಾನದ ಮೂಲಕ ತುರ್ತಾಗಿ ಬಗೆಹರಿಸಲು ಅಮಿತ್‌ ಶಾ- ಶತಾಯ-ಗತಾಯ ಪ್ರಯತ್ನ ಮಾಡಲಿದ್ದು, ಇಬ್ಬರಿಗೂ ಪಕ್ಷದ ಶಿಸ್ತು ಮತ್ತು ಸಂಘಟನೆ ಬಗ್ಗೆ ಕಿವಿಮಾತು ಹೇಳಲಿದ್ದಾರೆ.

ಬಿಜೆಪಿ ವರಿಷ್ಠರ ಎದುರು ಯಡಿಯೂರಪ್ಪ ಅವರ ಏಕಪಕ್ಷೀಯ ನಿರ್ಧಾರಗಳನ್ನು ಈಶ್ವರಪ್ಪ ಪ್ರಶ್ನಿಸಲಿದ್ದಾರೆ. ಹಾಗೆಯೇ, ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಪಕ್ಷದ ಕಟ್ಟಳೆಗಳನ್ನು ಮೀರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಯಡಿಯೂರಪ್ಪ ಪ್ರಸ್ತಾಪಿಸಲಿದ್ದಾರೆ.

ಅಮಿತ್‌ ಶಾ ಕರೆದಿರುವ ಸಭೆಯಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌, ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯದ ಆರ್‌ಎಸ್‌ಎಸ್‌ ಮುಖಂಡರನ್ನು ಆಹ್ವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com