ಶಾಸಕರ ಭವನದ ಕೊಠಡಿಗಳ ಬಾಡಿಗೆ ದುಪ್ಪಟ್ಟು; ಆದರೂ ಅದು ಹೆಚ್ಚೇನಲ್ಲ ಬಿಡಿ!

ಎಂಟು ವರ್ಷಗಳ ನಂತರ ವಿಧಾನಸಭೆ ಸಚಿವಾಲಯ ಶಾಸಕರ ಭವನದ ಕೊಠಡಿಗಳ ಬಾಡಿಗೆ ಏರಿಸಲು ನಿರ್ಧರಿಸಿದೆ...
ಶಾಸಕರ ಭವನ
ಶಾಸಕರ ಭವನ
ಬೆಂಗಳೂರು: ಎಂಟು ವರ್ಷಗಳ ನಂತರ ವಿಧಾನಸಭೆ ಸಚಿವಾಲಯ ಶಾಸಕರ ಭವನದ ಕೊಠಡಿಗಳ ಬಾಡಿಗೆ ಏರಿಸಲು ನಿರ್ಧರಿಸಿದೆ. 
ಶಾಸಕರು ಈ ಕೊಠಡಿಗಳಿಗೆ ಮಾರುಕಟ್ಟೆ  ಬೆಲೆಗಿಂತ ಅತಿ ಕಡಿಮೆ ಬಾಡಿಗೆ ಪಾವತಿಸುತ್ತಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಶಾಸಕರ ಭವನಕ್ಕೆ ಇನ್ನು ಮುಂದೆ ತಿಂಗಳಿಗೆ ಬಾಡಿಗೆ ದರ ಏರಿಕೆಯಾಗಲಿದೆ.
2009 ರಲ್ಲಿ ಬಾಡಿಗೆ ದರ ಪರಿಷ್ಕರಣೆ ನಡೆಸಲಾಗಿತ್ತು, ಸದ್ಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ತಮ್ಮ ಕೊಠಡಿಗೆ 500 ರು ಬಾಡಿಗೆ ನೀಡುತ್ತಿದ್ದರು. ಮಾಜಿ ಶಾಸಕರು ಮತ್ತು ಪರಿಷತ್ ಸದಸ್ಯರು ದಿನದ ಲೆಕ್ಕದಲ್ಲಿ 100 ರು. ಹಾಗೂ ತಿಂಗಳಿಗೆ 1 ಸಾವಿರ ರು. ಪಾವತಿಸುತ್ತಿದ್ದಾರೆ. ಈಗ ಬಾಡಿಗೆ ಏರಿಸಿದ ನಂತರ ಎಂಎಲ್ಎ ಮತ್ತು ಎಂ ಎಲ್ ಸಿಗಳಿಗೆ 1 ಸಾವಿರ ರು ಮತ್ತು  ಮಾಜಿ ಶಾಸಕ ರ ಅತಿಥಿ ಕೊಠಡಿಗಳಿಗೆ ದಿನಕ್ಕೆ 200 ರು. ನಂತೆ ತಿಂಗಳಿಗೆ 2ಸಾವಿರ ರು ನೀಡಬೇಕಾಗುತ್ತದೆ.
ಶಾಸಕರ ಭವನದಲ್ಲಿ ಯಾವುದೇ ಸವಲತ್ತುಗಳಿಗೂ ಕೊರತೆಯಿಲ್ಲ, ಇಲ್ಲಿ ಆಯುರ್ವೇದಿಕ್ ಮಸಾಜ್ ಪಾರ್ಲರ್, ಜಿಮ್, ಫುಡ್ ಕೋರ್ಟ್, ಪ್ರೆಸ್ ಮೀಟ್ ಮಾಡಲು ಸೆಮಿನಾರ್ ಹಾಲ್  ಜೊತೆಗೆ 24 ಗಂಟೆಗಳ ಕಾಲ ಬಿಸಿನೀರಿನ ವ್ಯವಸ್ಥೆ ಇದೆ.
ಮಾಜಿ ಮತ್ತು ಹಾಲಿ ಶಾಸಕರು ಇಲ್ಲಿ ಕೊಠಡಿ ಪಡೆಯಲು ಅರ್ಹರಾಗಿದ್ದಾರೆ, ಬೆಂಗಳೂರಿನ ಹೊರಗಿನ ಶಾಸಕರಿಗೆ ಕೊಠಡಿ ನೀಡಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಕೆಲವು ಸಚಿವರು ಕೂಡ ಶಾಸಕರ ಭವನದಲ್ಲಿ ಕೊಠಡಿಗಳನ್ನು ಪಡೆದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ  ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಿ.ಟಿ ರವಿ ಕೂಡ ಸಚಿವರಾಗಿದ್ದಾಗ ಶಾಸಕರ ಭವನದ ಕೊಠಡಿಗಳನ್ನು ಬಳಸುತ್ತಿದ್ದರು.
ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿರುವ ಕಾರಣ ಬಾಡಿಗೆ ದರವನ್ನು ಏರಿಸಲಾಗಿದೆ ಎಂದು  ವಿಧಾನಸಭೆ ಸಚಿವಾಲಯ ತಿಳಿಸಿದೆ. ಶಾಸಕರ ಭವನದಲ್ಲಿ ಶಾಸಕರಲ್ಲದವರು ಬಂದು ವಾಸ್ತವ್ಯ ಹೂಡುವುದನ್ನು ತಪ್ಪಿಸಲು ಇದು ಸಹಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಜಿ ಶಾಸಕರುಗಳ ಹೆಸರು ಹೇಳಿಕೊಂಡು ಯಾರು ಬೇಕಾದರೂ ಬಂದು ಉಳಿದುಕೊಳ್ಳುತ್ತಿದ್ದರು . ಅದಕ್ಕೆ ಈಗ ಬ್ರೇಕ್ ಬಿದ್ದಂತಾಗಿದೆ.
ಶಾಸಕರ ಭವನದ ಕೊಠಡಿಗಳಲ್ಲಿ ಶಾಸಕರಿಗಿಂತ ಅವರ ಸಹವರ್ತಿಗಳು ಮತ್ತು ಬೆಂಬಲಿಗರೇ ಹೆಚ್ಚಾಗಿರುತ್ತಾರೆ, ಹೀಗಾಗಿ ಇದರ ವಿರುದ್ಧವು ಕ್ರಮ ಕೈಗೊಳ್ಳಲು ಕೆಲ ನಿಯಮ ರೂಪಿಸುವುದಾಗಿ ಹೇಳಿದ್ದಾರೆ. ಶಾಸಕರು ಮತ್ತು ಎಂಎಲ್ ಸಿಗಳ ಹೆಸರು ಹೇಳಿಕೊಂಡು ಕೊಠಡಿ ಪಡೆಯುವುದು ಕಾನೂನು ಬಾಹಿರ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, 
ಶಾಸಕರ ಭವನದಲ್ಲಿ ಒಟ್ಟು 365 ಕೊಠಡಿಗಳಿವೆ, ಅದರಲ್ಲಿ 250 ರೂಂ ಗಳು ಶಾಸಕರಿಗೆ, 75 ವಿಧಾನ ಪರಿಷತ್ ಸದಸ್ಯರಿಗೆ ಉಳಿದ 15 ಕೊಠಡಿಗಳು ಅತಿಥಿಗಳಿಗೆ ಮೀಸಲಾಗಿವೆ.
ಎರಡು ಕೊಠಡಿ ಇದ್ದರೇ ಅದಕ್ಕೆ 500 ರು. 1 ಕೊಠಡಿಗೆ 100 ರು. ಮಾಜಿ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ದಿನಕ್ಕೆ 200 ರು, ಅತಿಥಿಗಳಿಗೆ ತಿಂಗಳಿಗೆ 1 ಸಾವಿರ ರು. ಬಾಡಿಗೆ ವಿಧಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com