ಸ್ಯಾಂಡಲ್ ವುಡ್ ನಟಿ ಜೊತೆ ಶಾಸಕ ಇಕ್ಬಾಲ್ ಅನ್ಸಾರಿ 2ನೇ ವಿವಾಹ: ಆಸ್ತಿ ವಿವಾದದಿಂದ ಬಹಿರಂಗ

ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕನ್ನಡದ ನಟಿಯೊಬ್ಬರ ಜೊತೆ 2 ನೇ ವಿವಾಹ ಮಾಡಿಕೊಂಡಿರವುದು ಸಹೋದರರ ನಡುವಿನ ಆಸ್ತಿ ಹಂಚಿಕೆ ವಿವಾದದಿಂದ ...
ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ನಟಿ ಪಂಚಮಿ
ಶಾಸಕ ಇಕ್ಬಾಲ್ ಅನ್ಸಾರಿ ಮತ್ತು ನಟಿ ಪಂಚಮಿ
ಬೆಂಗಳೂರು: ಗಂಗಾವತಿ  ಶಾಸಕ ಇಕ್ಬಾಲ್ ಅನ್ಸಾರಿ  ಕನ್ನಡದ ನಟಿಯೊಬ್ಬರ ಜೊತೆ 2 ನೇ ವಿವಾಹ ಮಾಡಿಕೊಂಡಿರವುದು ಸಹೋದರರ ನಡುವಿನ ಆಸ್ತಿ ಹಂಚಿಕೆ ವಿವಾದದಿಂದ ಬಹಿರಂಗವಾಗಿದೆ.
ಶಾಸಕ ಅನ್ಸಾರಿ ತಮ್ಮ ಸಹೋದರರಿಗೆ ಸೇರಬೇಕಾದ ಆಸ್ತಿಯನ್ನು 2ನೇ ಪತ್ನಿ ಕನ್ನಡ ನಟಿ ಪಂಚಮಿ ಹೆಸರಿಗೆ ಬರೆದಿರುವುದಾಗಿ ಸಹೋದರರು ಆರೋಪಿಸಿದ್ದಾರೆ.
ಆಸ್ತಿ ವಿವಾದದಿಂದಾಗಿ ಇಕ್ಬಾಲ್ ಅನ್ಸಾರಿ ಅವರು ನಟಿ ಪಂಚಮಿಯನ್ನು 2ನೇ ವಿವಾಹವಾಗಿರುವ ಗುಟ್ಟು ರಟ್ಟಾದಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಸಹೋದರರ ನಡುವೆ ಆಸ್ತಿ ವಿವಾದ ನಡೆದಿತ್ತು.
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿ ಪಂಚಮಿ ಸಿನಿಮಾ, ಧಾರವಾಹಿಗಳ ಮೂಲಕವೂ ಜನಪ್ರಿಯರಾಗಿದ್ದರು. ಇದೀಗ ಇಕ್ಬಾಲ್ ಅನ್ಸಾರಿ ಜೊತೆ ಗುಟ್ಟಾಗಿ ಸಂಬಂಧ ಹೊಂದಿರುವ ವಿಷಯ ಬಯಲಾಗಿದೆ. ಬಳ್ಳಾರಿಯ ಹೊಸಪೇಟೆಯಲ್ಲಿ ನಟಿ ಪಂಚಮಿಗೆ ಅನ್ಸಾರಿ ಮನೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಶಾಸಕ ಇಕ್ಬಾಲ್ ಅನ್ಸಾರಿಗೆ ಇಡೀ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಬಾರ್‍ಗಳು ಹಾಗೂ ವೈನ್ ಶಾಪ್‍ಗಳಿವೆ. ಅಪ್ಪ ಮಾಡಿದ್ದ ಆಸ್ತಿಯನ್ನ ಸಹೋದರರಿಗೆ ಹಂಚದೆ ಇಬ್ಬರು ಹೆಂಡತಿಯ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿದಾಗ 2ನೇ ಸಂಬಂಧ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಸಹೋದರರು ಸಿಟ್ಟಿಗೆದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com