ಬಿಜೆಪಿ ಪಕ್ಷದ ನಾಯಕರು ಸಾರ್ವಜನಿಕರ ಮನ್ನಣೆಗೆ ಕಾರಣವಾಗಿರುವ ಕೆಪಿಎಂಇ ಕಾಯ್ದೆ ಬಗ್ಗೆ ಸಂಪೂರ್ಣ ವಿವರ ತಿಳಿಯದೇ ಕೇವಲ ವೈದ್ಯರು ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾರೆ ಎಂಬ ಒಂದೇ ಕಾರಣದಿಂದಾಗಿ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುವ ಮೂಲಕ ಇದೀಗ ರಾಜ್ಯದ ಜನರ ಮುಂದೆ ಮುಜುಗರಕ್ಕೀಡಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ವೈದ್ಯರ ಮುಷ್ಕರದ ಪರಿಸ್ಥಿತಿ ಕುರಿತಂತೆ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಹೋರಾಟದ ರೂಪುರೇಷೆ ಸಿದ್ಧಪಡಿಸುವಲ್ಲಿ ಬಿಜೆಪಿ ಮುಖಂಡರು ವಿಫಲವಾಗಿದ್ದಾರೆ. ಅಂತೆಯೇ ಜೆಡಿಎಸ್ ಕೂಡ ಈ ಬಗ್ಗೆ ವೈದ್ಯರಿಗೆ ಬಹಿರಂಗ ಬೆಂಬಲ ನೀಡಿದ್ದು, ಮುಷ್ಕರದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರು ವೈದ್ಯರ ಬೇಡಿಕೆ ನ್ಯಾಯುತವಾದದ್ದು ಎಂದು ಹೇಳಿದ್ದರು.