ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಟಿಎ ಶರಣವಣ, ಜಮೀರ್ ಚಾಮರಾಜಪೇಟೆಗೆ ಬಂದು ನೋಡಿ ಎಂದು ಹೇಳಿದ್ದರು. ಆದರೆ ಈಗ ನಾವು ಚಾಮರಾಜಪೇಟೆಯಲ್ಲೇ ಇದ್ದೇವೆ. ಏನ್ ಮಾಡ್ತೀರಾ ಜಮೀರ್ ಎಂದು ಪ್ರಶ್ನಿಸಿದರು. 'ನಮ್ಮ ಕ್ಷೇತ್ರದಲ್ಲಿ ರೇವಣ್ಣ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕ್ತೀರಾ..? ಮೊದಲು ನಿಮಗೆ ಠೇವಣಿ ಸಿಗುತ್ತದೆಯೇ ಎಂದು ನೋಡಿಕೊಳ್ಳಿ ಎಂದು ಕಾಲೆಳೆದರು. ಜೆಡಿಎಸ್ ತಾಯಿಯಂತೆ, ದೇವೇಗೌಡ ನನ್ನ ತಂದೆಯಂತೆ, ಕುಮಾರಸ್ವಾಮಿ ಅಣ್ಣಾ ಎಂದು ಹೇಳುತ್ತಿದ್ದಿರಿ.. ಈಗ ಅವರ ವಿರುದ್ಧವೇ ನಿಂತು ಬೆನ್ನಿಗೆ ಚೂರಿ ಹಾಕ್ತೀರಾ ಎಂದು ಶರವಣ ಆಕ್ರೋಶ ವಕ್ತಪಡಿಸಿದರು.