"ಅಹಿಂದ " ಮತದಲ್ಲಿ ಒಡಕಿನ ಸಂದೇಶ

ಮೇ 12 ರ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಮಂತ್ರದ ಮೂಲಕ ಗೆಲುವು ಸಾಧಿಸಲು ಕಾಂಗ್ರೆಸ್ ಕನಸು ಕಾಣುತ್ತಿದೆ. ಆದರೆ, ಕಾಂಗ್ರೆಸ್ ಲೆಕ್ಕಾಚಾರದಿಂದ ದಲಿತ ಸಮುದಾಯ ಅಸಮಾಧಾನಗೊಂಡಿದೆ ಎಂದು ದಲಿತ ರಾಜಕೀಯ ಬಲ್ಲವರೂ ಹೇಳುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಿಶಿಷ್ಟ ಜಾತಿ. ಪಂಗಡದ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ  ದೇಶಾದ್ಯಂತ ದಲಿತ ಸಮುದಾಯ ಒಗ್ಗೂಡಿ ಹೋರಾಟ ನಡೆಸುತ್ತಿದೆ. ಆದಾಗ್ಯೂ, ಕರ್ನಾಟಕದಲ್ಲಿ ಈ ಸಮುದಾಯದಲ್ಲಿನ  ಪ್ರಸ್ತುತ ಸಾಮಾಜಿಕ ರಾಜಕೀಯ ಸ್ಥಿತಿ ಭಿನ್ನವಾಗಿದೆ.

ಇನ್ನಿತರ ಸಮುದಾಯಗಳಂತೆ ದಲಿತ ಸಮುದಾಯವೂ ವಿಂಗಡಣೆಯಾಗಿದೆ. ಈ ವರ್ಗ ಯಾವಾಗಲೂ ತಮ್ಮನ್ನು ಬೆಂಬಲಿಸದೆ ಎಂದು ಕಾಂಗ್ರೆಸ್ ನೆಚ್ಚಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಮಂತ್ರದ ಮೂಲಕ ಈ ಸಮುದಾಯಕ್ಕೆ ಹಲವು ಯೋಜನೆಗಳನ್ನು ನೀಡಿದ್ದಾರೆ.

ಕಾಂಗ್ರೆಸ್ ತಪ್ಪು ಲೆಕ್ಕಾಚಾರದಲ್ಲಿಯೇ ?

ಮೇ 12 ರ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಮಂತ್ರದ ಮೂಲಕ ಗೆಲುವು ಸಾಧಿಸಲು ಕಾಂಗ್ರೆಸ್  ಕನಸು ಕಾಣುತ್ತಿದೆ. ಆದರೆ, ಕಾಂಗ್ರೆಸ್ ಲೆಕ್ಕಾಚಾರದಿಂದ ದಲಿತ ಸಮುದಾಯ ಅಸಮಾಧಾನಗೊಂಡಿದೆ ಎಂದು ದಲಿತ ರಾಜಕೀಯ ಬಲ್ಲವರೂ ಹೇಳುತ್ತಾರೆ.

 ಜಾತಿಗಣತಿ ಮಾಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇನ್ನೂ ಜನರ ಮುಂದಿಟ್ಟಿಲ್ಲ.ಒಟ್ಟಾರೇ, ಪರಿಶಿಷ್ಟ ಜಾತಿ, ಪಂಗಡದ ಜನಸಂಖ್ಯೆ 1. 50 ಕೋಟಿ ಇದ್ದು,
ರಾಜ್ಯದ ಜನಸಂಖ್ಯೆಯಲ್ಲಿ ಶೇ. 25 ರಷ್ಟಿರುವ ಈ ಸಮುದಾಯ ರಾಜ್ಯದ ಅತಿದೊಡ್ಡ ಸಮುದಾಯವಾಗಿದೆ ಎಂಬ ವರದಿ ಬಂದಿದೆ.

 ಆದರೆ, ಆ ಸಮುದಾಯದ ಮತಗಳನ್ನು ಚದುರದೆ ನಮ್ಮಗೆ ಬರುತ್ತವೆ ಎಂಬ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಿಗೂ ನಂಬಿಕೆ ಇಲ್ಲ.

ರಾಜ್ಯ ಬಿಎಸ್ಪಿ ಮಾಜಿ ಅಧ್ಯಕ್ಷ ಬಿ. ಗೋಪಾಲ್ ಪ್ರಕಾರ, ದಲಿತ ಸಮುದಾಯ ಅತ್ಯಂತ ದುರ್ಬಲವಾಗಿದೆ. ಸ್ಥಳೀಯ ರಾಜಕೀಯ ಬಲಾಡ್ಯ ನಾಯಕರ ನಿರ್ದೇಶನ ವ್ಯವಸ್ಥೆಯಂತೆ ರಾಜ್ಯದ ಎಲ್ಲಾ ಕಡೆಯಲ್ಲಿನ ದಲಿತ ಮತದಾರರು ಮತ ಹಾಕುತ್ತಾರೆ. ಸ್ಥಳೀಯ ಮಧ್ಯವರ್ತಿ ದಲಿತ ಮತದಾರದ ಮೌಲ್ಯವನ್ನು ನಿರ್ಧಾರ ಮಾಡುತ್ತಾರೆ. ಅವರು ಮತದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುತ್ತಾರೆ.

ದಲಿತ ಸಮುದಾಯದಲ್ಲಿಯೇ 102 ಉಪಜಾತಿಗಳಿದ್ದು, ಬಲ ಪಂಥ ಹೆಚ್ಚು ಪ್ರಯೋಜನ ಪಡೆದಿದ್ದರೆ, ಎಡಪಂಥ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ ಎಂದು ರಾಜ್ಯ ಸಮತಾ ಸೈನಿಕ ದಳ ಅಧ್ಯಕ್ಷ ವೆಂಕಟಸ್ವಾಮಿ ಹೇಳುತ್ತಾರೆ.

ಪರಿಶಿಷ್ಟ ಸಮುದಾಯದಲ್ಲಿಯೇ ಒಳಮೀಸಲಾತಿಗಾಗಿ ನ್ಯಾಯಾಧೀಶ ಎ. ಜೆ. ಸದಾಶಿವ ವರದಿ ಅನುಷ್ಠಾನಗೊಳಿಸಬೇಕೆಂದು ಎಡ ಸಮುದಾಯ ಒತ್ತಾಯಿಸುತ್ತಿದೆ. ಆದರೆ, ಇದನ್ನು ಸಚಿವ ಸಂಪುಟದ ತೀರ್ಮಾನಕ್ಕೆ ಬಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಾ ಬಂದಿದ್ದಾರೆ.

ಇದು ಕಾಂಗ್ರೆಸ್ ವಿರುದ್ಧ ಈ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದ್ದು, ಬಿಜೆಪಿಯತ್ತ ವಾಲುವಂತೆ ಮಾಡಿದೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡದಿರುವ ಕಾಂಗ್ರೆಸ್ ವಿರುದ್ಧ ಬಲಸಮುದಾಯವೂ ಅಸಮಾಧಾನಗೊಂಡಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮಾದಿಗ ಸಮುದಾಯದ ಹೋರಾಟ ಹಾಗೂ ಬಿಎಸ್ಪಿ , ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಮತಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ಪರಿಶಿಷ್ಟ ಜಾತಿ , ಪಂಗಡದ ನೌಕರರ ಒಕ್ಕೂಟದ ಅಧ್ಯಕ್ಷ ಡಿ. ಶಿವಶಂಕರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com