218 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಟ್ಟು 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೊನೆಗೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಒಟ್ಟು 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಈ ಪೈಕಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ (ವರುಣಾ ಕ್ಷೇತ್ರ), ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯರೆಡ್ಡಿ (ಜಯನಗರ), ಮಂಡ್ಯದಿಂದ ನಟ ಅಂಬರೀಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಉಳಿದಂತೆ ಯಮಕನ ಮರಡಿ ಕ್ಷೇತ್ರದಿಂದ   ಸತೀಶ್ ಜಾರಕಿ ಹೊಳಿ, ಖಾನಾಪುರದಿಂದ ಅಂಜಲಿ ನಿಂಬಾಳ್ಕರ್, ತೆರದಾಳ ದಿಂದ ಉಮಾಶ್ರೀ, ಮುದ್ದೇ ಬಿಹಾಳದಿಂದ ಅಪ್ಪಾಜಿ ನಾಡಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕೊರಟಗೆರೆಯಿಂದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ, ಬಾದಾಮಿ ಯಿಂದ ದೇವರಾಜ್ ಪಾಟೀಲ್, ಬಬಲೇಶ್ವರದಲ್ಲಿ ಎಂಬಿ ಪಾಟೀಲ್, ಜೇವರ್ಗಿಯಿಂದ ಅಜಯ್ ಸಿಂಗ್, ಗಂಗಾವತಿಯಿಂದ ಇಕ್ಬಾಲ್ ಅನ್ಸಾರಿ, ಧಾರವಾಡದಲ್ಲಿ ವಿನಯ್ ಕುಲಕರ್ಣಿ, ಹಳಿಯಾಳದಿಂದ ಆರ್ ವಿ ದೇಶಪಾಂಡೆ, ಕಾರವಾರದಲ್ಲಿ ಸತೀಶ್ ಸೈಲ್, ಹಿರೇಕೆರೂರು ನಲ್ಲಿ ಬಿಸಿ ಪಾಟೀಲ್, ಹಡಗಲಿಯಿಂದ ಪಿಟಿ ಪರಮೇಶ್ವರ್ ನಾಯ್ಕ್ ಟಿಕೆಟ್ ಪಡೆದಿದ್ದಾರೆ.
ಅಂತೆಯೇ ಬಳ್ಳಾರಿಯಿಂದ ಅನಿಲ್ ಲಾಡ್ಸ, ಹೊಳಲ್ಕರೆಯಿಂದ ಹೆಚ್ ಆಂಜನೇಯ, ದಾವಣಗೆರೆ ಉತ್ತರ ಕ್ಷೇತ್ರದಿಂದ ಹೆಚ್ ಹೆಚ್ ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕ್ಷೇತ್ರದಿಂ ಶ್ಯಾಮನೂರು ಶಿವಶಂಕರಪ್ಪ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಬ್ಯಾಟರಾಯನಪುರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ, ಆರ್ ಆರ್ ನಗರದಲ್ಲಿ ಮುನಿರತ್ನ, ಕೋಲಾರದಲ್ಲಿ ಸೈಯ್ಯದ್ ಜಮೀರ್ ಪಾಷಾ ಅವರಿಗೆ ಟಿಕೆಟ್ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com