ಚುನಾವಣೆ : ಸಿಎಂ ಟಾಕ್ ಆ್ಯಪ್ ಗೆ ಕಾಂಗ್ರೆಸ್ ಚಾಲನೆ

ತಂತ್ರಜ್ಞಾನಗಳ ಮೂಲಕ ಮತದಾರರನ್ನು ಸೆಳೆಯಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಸಿಎಂ ಟಾಕ್ ಆ್ಯಪ್ ಗೆ ಚಾಲನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು :  ತಂತ್ರಜ್ಞಾನಗಳ ಮೂಲಕ ಮತದಾರರನ್ನು ಸೆಳೆಯಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಕಾಂಗ್ರೆಸ್   ಸಿಎಂ ಟಾಕ್  ಆ್ಯಪ್  ಗೆ ಚಾಲನೆ ನೀಡಿದೆ.

 ಈ  ಆಪ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಅಸಂಖ್ಯಾತ ಜನರನ್ನು ತಮ್ಮ ಸಂದೇಶದ ಮೂಲಕ ತಲುಪಲಿದ್ದಾರೆ ಎಂದು  ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಎಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಈ ಆಪ್ ನ್ನು ಬಿಡುಗಡೆಗೊಳಿಸಿದರು. ಗೂಗಲ್ ಪ್ಲೇ ಸ್ಟೋರ್ ನಿಂದ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಹೈದ್ರಾಬಾದ್ ಮೂಲದ ಸಂಸ್ಥೆಯೊಂದು ಅಭಿವೃದ್ದಿಪಡಿಸಿರುವ ಈ ಆ್ಯಪ್ ನ್ನು ಮೊಬೈಲ್ ಗ್ರಾಹಕರು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಕ್ಯೂರ್ ಕೋಡ್ ಸ್ಕಾನ್ ಮಾಡಿಕೊಂಡು ಪೋಸ್ಟರ್ ಮೂಲಕ ಸಿದ್ದರಾಮಯ್ಯ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

ಪ್ರತಿದಿನ ಹೊಸ ಹೊಸ ವಿಡಿಯೋಗಳನ್ನು ಅಪ್ ಡೇಟ್ ಮಾಡಲಾಗುತ್ತದೆ. ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಸಾಲಮನ್ನಾ, ನೀರಾವರಿ ಯೋಜನೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮೊದಲಾದವುಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಲಿದ್ದಾರೆ.

 ನಿನ್ನೆ ಒಂದೇ ದಿನ ಸುಮಾರು 61 ಮಂದಿ ಜನರು ಈ ಆ್ಯಪ್ ನ್ನು  ಡೌನ್ ಲೋಡ್ ಮಾಡಿಕೊಂಡಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com