ಆತಿಥ್ಯ ವಿಚಾರವಾಗಿ ಹೆಚ್‌ಡಿಕೆ ಸರ್ಕಾರಕ್ಕೆ ಮುಜುಗರ; ಆತಿಥ್ಯದ ಖರ್ಚಿನ ಲೆಕ್ಕ ಕೊಡಿ ಎಂದ ಸಿಎಂಗಳು!

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಘಟಬಂಧನ ಶಕ್ತಿ ಪ್ರದರ್ಶಿಸಿದ್ದ ವಿವಿಧ ರಾಜ್ಯಗಳ...
ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರು
ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರು
Updated on: 
ಬೆಂಗಳೂರು: ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಘಟಬಂಧನ ಶಕ್ತಿ ಪ್ರದರ್ಶಿಸಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇದೀಗ ತಮಗೆ ಮಾಡಿದ್ದಾರೆ ಎನ್ನಲಾಗುತ್ತಿರುವ ಖರ್ಚಿಗೆ ಆಧಾರ ಕೇಳಿದ್ದು ಕುಮಾರಸ್ವಾಮಿ ಸರ್ಕಾರ ಇದೀಗ ಮುಜುಗರಕ್ಕೀಡಾಗಿದೆ. 
ಇನ್ನು ಆತಿಥ್ಯದ ವಿಚಾರದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ 9 ಲಕ್ಷ ರುಪಾಯಿ ಖರ್ಚು ಮಾಡಿರುವುದಾಗಿ ವರದಿಯಾಗದ್ದು ಇದರಿಂದ ದಂಗಾಗಿರುವ ಚಂದ್ರಬಾಬು ಅವರು ಪ್ರತಿ ವಸ್ತುವನ್ನು ಉಲ್ಲೇಖಿಸಿ ಬಿಲ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ. 
ಸೇವಿಸದೆ ಇರುವ ಅನೇಕ ಆಹಾರ, ಪಾನೀಯಗಳನ್ನು ಪಟ್ಟಿಯಲ್ಲಿ ಸೇರಿಸಿರುವುದರ ಜತೆಗೆ 3-4 ಗಂಟೆಗೆ ಈ ಪ್ರಮಾಣದ ಬಿಲ್ ಹಾಕಲಾಗಿದೆ. ಇನ್ನು ನನ್ನ ಜೊತೆ ಕೆಲ ಸಚಿವರು, ಅಧಿಕಾರಿಗಳೂ ಇದ್ದರು. ಅವರೇನಾದರೂ ಈ ಬಿಲ್ ಗೆ ಕಾರಣವಿರಬಹುದೇ ಎಂಬುದನ್ನೂ ಪತ್ತೆ ಹಚ್ಚಬೇಕಿದೆ ಹೀಗಾಗಿ ಸಂಪೂರ್ಣ ಖರ್ಚಿವ ವರದಿ ನೀಡಿ ಎಂದು ಹೇಳಿದ್ದಾರೆ. 
ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಕೂಡ ದುಬಾರಿ ವೆಚ್ಚಕ್ಕೆ ಕಾರಣ ಕೇಳುತ್ತಿದ್ದಾರೆ. ಅನೇಕ ಮುಖ್ಯಮಂತ್ರಿಗಳು ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೆ ಈ ಬಗ್ಗೆ ವಿವರ ನೀಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. 
ಇದೇ ವೇಳೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಹಾಲು ಹಣ್ಣು ಮಾತ್ರ ಸೇವಿಸಿದ್ದರು. ಮಧ್ಯಾಹ್ನ ಊಟ ಸಹ ಮಾಡಿಲ್ಲ. ಭದ್ರತೆ ದೃಷ್ಟಿಯಿಂದ ಹೊಟೇಲ್ ನಲ್ಲಿ ಉಳಿದರು. ಇದು ಪಕ್ಷದ ಕಾರ್ಯಕ್ರಮವಾದ್ದರಿಂದ ಸರ್ಕಾರ ಬಿಲ್ ಪಾವತಿಸುವ ಅಗತ್ಯವಿಲ್ಲ ಎಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕ ಸಂಚಾಲಕ ಪೃಥ್ವಿ ರೆಡ್ಡಿ ಹೇಳುತ್ತಾರೆ. 
ಯಾರಿಗೆ ಎಷ್ಟೆಷ್ಟು ಖರ್ಚು?
ಚಂದ್ರಬಾಬು ನಾಯ್ಡುಗೆ 8.72 ಲಕ್ಷ, ಕೇಜ್ರಿವಾಲ್ 1.81 ಲಕ್ಷ, ಮಾಯಾವತಿ 1.44 ಲಕ್ಷ, ಅಖಿಲೇಶ್ ಯಾದವ್ 1.02 ಲಕ್ಷ, ಶರದ್ ಯಾದವ್ ಮತ್ತು ಪಿಣರಾಯಿ ವಿಜಯನ್ ಅವರಿಗೆ 1 ಲಕ್ಷ ರುಪಾಯಿ ಖರ್ಚು ಮಾಡಿರುವುದಾಗಿ ಬಿಲ್ ನಲ್ಲಿ ತೋರಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com