ಜಮಖಂಡಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬುದೆಲ್ಲ ವದಂತಿ. ಅವರಿಗೆ ಯಾವ ಅಸಮಾಧಾನ, ಅತೃಪ್ತಿಯೂ ಇಲ್ಲ. ಅವರನ್ನು ತೆಗೆದು ಅವರ ಮನೆಯಲ್ಲೇ ಸಚಿವ ಸ್ಥಾನ ಕೊಟ್ಟಿದ್ದೇವೆ. ಹೀಗಾಗಿ ಇಲ್ಲಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ.