ಇದೇ ವೇಳೆ ಕೋಮು ಸೌಹಾರ್ಧ ಕೆರಳಿಸುವ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ ಬಿಎಸ್ ಯಡಿಯೂರಪ್ಪ, ಯಾವುದೇ ನಾಯಕನೂ ಕೂಡ ಸಮುದಾಯಗಳ ಭಾವನೆ ಕೆರಳಿಸುವ ಹೇಳಿಕೆ ನೀಡಬಾರದು ಎಂದು ಹೇಳಿದರು. ಇದೇ ವೇಳೆ ಅನಂತ್ ಕುಮಾರ್ ಹೆಗ್ಡೆ ವಿಚಾರ ಪ್ರಸ್ತಾಪಿಸಿದ ಬಿಎಸ್ ವೈ, ಅಂತಹ ಹೇಳಿಕೆಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ, ಅನಂತ್ ಕುಮಾರ್ ಹೆಗ್ಡೆ ಅವರಿಗೆ ಈ ಬಗ್ಗೆ ಸಲಹೆ ನೀಡಲಾಗಿದ್ದು, ಹೆಗ್ಡೆ ಕೂಡ ತಮ್ಮ ಹೇಳಿಕೆ ಸಂಬಂಧ ಸಂಸತ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.