

ಬೆಂಗಳೂರು: ಬಜೆಟ್ ನಲ್ಲಿ ಸಾಮಾನ್ಯವಾಗಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ ಮಾತೃ ವಾತ್ಸಲ್ಯ ತೋರಲಾಗುತ್ತದೆ. ಹೊಸ ಸರ್ಕಾರದ ಬಜೆಟ್ ನಲ್ಲಿಯೂ ಸಮಪರ್ಕ ಅನುದಾನ ದೊರೆಯಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
ಬಿಡಿಎ ಹಿರಿಯ ಅಧಿಕಾರಿಗಳ ಪ್ರಕಾರ, ಹೊಸ ಸರ್ಕಾರದ ಬಜೆಟ್ ನಲ್ಲಿ 1600 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅರ್ಕಾವತಿ ಲೇಔಟ್ ನಿಂದ ಬರುವವರಿಗೆ ಕೆಂಪೇಗೌಡ ಲೇಔಟ್ ನಲ್ಲಿ ಪರ್ಯಾಯ ನಿವೇಶನ ಒದಗಿಸಿದ್ದರಿಂದ ಬಿಡಿಎ ಸುಮಾರು 700 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ.
ಪೆರಿಪೆರಲ್ ವರ್ತುಲ ರಸ್ತೆ ಯೋಜನೆ ಕಳೆದೊಂದು ದಶಕದಿಂದ ಕಾರ್ಯಗತಗೊಳ್ಳದೆ ಹಾಗೆಯೇ ಇದೆ. ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಗಾಗಿ 1 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಬಿಡಿಎ ನಿರೀಕ್ಷಿಸಿದೆ.
ದೊಡ್ಡನ ಕುಂದಿ , ಹೆಣ್ಣೂರು ಮೇಲ್ಸುತುವೆ, ಹುಳಿಮಾವು ರೈಲ್ವೆ ಕ್ರಾಸಿಂಗ್ ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನವಾಗಬೇಕಿದ್ದು, ಕೆರೆಗಳ ಅಭಿವೃದ್ದಿಗಾಗಿ 100 ಕೋಟಿ ರೂಪಾಯಿ ಅನುದಾನ ಸಿಗುವ ಭರವಸೆಯಲ್ಲಿದೆ ಬಿಡಿಎ.