ಬೆಂಗಳೂರು: ಬೃಹತ್ ಬೆಂಗಳೂರು ಮಹನಾಗರ ಪಾಲಿಕೆ ಜಾಹೀರಾತು ನೀಡಿದ್ದ ಸಹಾಯವಾಣಿ ಸಂಖ್ಯೆಯನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಉಪಮುಖ್ಯಮಂತ್ರಿ ಜಿ, ಪರಮೇಶ್ವರ್ ನೆಟ್ಟಿಜನ್ ಗಳಿಂದ ಟ್ರೋಲ್ ಗೊಳಗಾಗಿದ್ದಾರೆ.
ನಗರದಲ್ಲಿ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಡಿಸಿಎಂ ಪರಮೇಶ್ವರ್ ಟ್ವಿಟ್ಟರ್ ನಲ್ಲಿ ಬಿಬಿಎಂಪಿ ಹೆಲ್ಪ್ ಲೈನ್ ನಂಬರ್ ಶೇರ್ ಮಾಡಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಜನತೆ ಬೆಂಗಳೂರಿನ ರಸ್ತೆಗಳನ್ನು ತುರ್ತಾಗಿ ರಿಪೇರಿ ಮಾಡಿಸುವ ಅಗತ್ಯತೆ ಡಿಸಿಎಂ ಗೆ ತಿಳಿದಿಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ,
ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ಆರೋಪ ಮಾಡಿರುವ ನೆಟ್ಟಿಜನ್ ಗಳು ಹೆಲ್ಪ್ ಲೈನ್ ಯಾವತ್ತೂ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಹರಳೂರು ಮತ್ತು ಹೊರಮಾವು ರಸ್ತೆಗುಂಡಿಗಳ ಬಗ್ಗೆ ಭಾರೀ ದೊಡ್ಡ ಪ್ರಮಾಣದಲ್ಲಿ ದೂರಿರುವ ಟ್ಟಿಟ್ಟಿಗರು ,ರಸ್ತೆಗಳ ದುಸ್ಥಿತಿ ಬಗ್ಗೆ ಟಾಂಟ್ ನೀಡಿದ್ದಾರೆ.
ವಾಟ್ಸಾಪ್ ಸಹಾಯವಾಣಿ ಸಂಖ್ಯೆ ಈಗಲೂ ಅಸ್ಥತ್ವದಲ್ಲಿದೆ, ಆದರೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ, ನಗರದಲ್ಲಿದ್ದ ಸುಮಾರು 2 ಸಾವಿರ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದು, ಶೀಘ್ರವೇ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್ ತಿಳಿಸಿದ್ದಾರೆ.