ಬದಾಮಿ: ರೆಡ್ಡಿ ಜೊತೆ ಸೇರಿ ಬಳ್ಳಾರಿ ಮತ್ತು ಹೊಸಪೇಟೆಯ ಗುಡ್ಡಗಳನ್ನು ಖಾಲಿ ಮಾಡಿದ ಶ್ರೀರಾಮುಲು ಕಣ್ಣು ಈಗ ಬಾದಾಮಿಯ ಬೆಟ್ಟಗಳ ಮೇಲೆ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರತಿಸ್ಫರ್ಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಳಿದಾಸ ಶಿಕ್ಷಣ ಸಂಸ್ಧೆಯಲ್ಲಿ ವಿವಿಧ ಸಮಾಜಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಸಿಎಂ, ಶ್ರೀರಾಮುಲುಗೂ ಬಾದಾಮಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಶ್ರೀರಾಮುಲು ಆಪ್ತ ಸ್ನೇಹಿತ ಜನಾರ್ಧನ್ ರೆಡ್ಡಿ ಬಳ್ಳಾರಿ ಜಿಲ್ಲೆಯ ಗಣಿ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಈಗ ಶ್ರೀರಾಮುಲು ಬಾದಾಮಿಯ ಬೆಟ್ಟಗಳನ್ನು ನಾಶ ಮಾಡಲು ಬಂದಿದ್ದಾರೆ ಎಂದು ಸಿಎಂ ಆರೋಪಿಸಿದರು.
ಇದೇ ವೇಳೆ, ಮುಂದಿನ ಐದು ವರ್ಷಗಳಲ್ಲಿ ತಾವು ಬಾದಾಮಿಯ ಒಟ್ಟಾರೆ ಅಭಿವೃದ್ಧಿಗೆ ಹೆಚ್ಚು ಗಮನಹರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.