ಬೆಂಗಳೂರು: 66 ವರ್ಷ, ಆರು ಮಹಿಳಾ ಶಾಸಕಿಯರು!

ಕರ್ನಾಟಕ ರಾಜ್ಯ ರಚನೆಯಾಗಿ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಂದಿನವರೆಗೆ 66 ವರ್ಷಗಳಲ್ಲಿ ಕೇವಲ ಆರು ಮಹಿಳೆಯರು ಬೆಂಗಳೂರು ನಗರದಿಂಡ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು: 66 ವರ್ಷ, ಆರು ಮಹಿಳಾ ಶಾಸಕಿಯರು!
ಬೆಂಗಳೂರು: 66 ವರ್ಷ, ಆರು ಮಹಿಳಾ ಶಾಸಕಿಯರು!
Updated on
ಬೆಂಗಳೂರು: ಕರ್ನಾಟಕ ರಾಜ್ಯ ರಚನೆಯಾಗಿ 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಂದಿನವರೆಗೆ 66 ವರ್ಷಗಳಲ್ಲಿ ಕೇವಲ ಆರು ಮಹಿಳೆಯರು ಬೆಂಗಳೂರು ನಗರದಿಂಡ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಇದೀಗ ರಾಜ್ಯ 14ನೇ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಈ ಬಾರಿ ಬೆಂಗಳೂರು ನಗರದಿಂದ ಐವರು ಮಹಿಳಾ ಅಭ್ಯರ್ಥಿಗಳು ಚುನಾವಣೆ ಕಣಕ್ಕಿಳಿದಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಹಾಗೂ ಬಿಜೆಪಿ, ಆಮ್ ಆದ್ಮಿ ಪಕ್ಷದಿಂದ ತಲಾ ಒಬ್ಬರು ಸೇರಿದ್ದಾರೆ.
ಮಾಜಿ ಮೇಯರ್ ಆಗಿರುವ ಜಿ. ಪದ್ಮಾವತಿ ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ರಾಜ್ಯದ ಮೊದಲ ಮಹಿಲಾ ಜಿಲ್ಲಾಧಿಕಾರಿ ರೇಣುಕಾ ವಿಶ್ವನಾಥನ್ ಬೆಂಗಳೂರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿದ್ದಾರೆ.
ಕರ್ನಾಟಕದಲ್ಲಿ ಸುಮಾರು 6.5 ಕೋಟಿ, ಜನಸಂಖ್ಯೆ ಇದ್ದು ಇದರಲ್ಲಿ ಸುಮಾರು ಶೇ.49 ಮಹಿಳೆಯರಾಗಿದ್ದಾರೆ. ಆದರೆ ರಾಜಕೀಯದಲ್ಲಿ ಮಹಿಳಾ ಪ್ರಾತಿನಿದ್ಯದ ವಿಚಾರಕ್ಕೆ ಬಂದಾಗ ಮಾತ್ರ ಮಹಿಳೆಯರ ಸಂಖ್ಯೆ ಕೆಲವೇ ಕೆಲವಷ್ಟಿರುವುದನ್ನು ನಾವು ಕಾಣುತ್ತೇವೆ. ಕಳೆದ 66 ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 918 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇದರಲ್ಲಿ ರಾಜ್ಯಾಂದ್ಯಂತ 91 ಮಹಿಳೆಯರು ಆಯ್ಕೆಯಾಗಿದ್ದಾರೆ.
ಇನ್ನು ಹೆಚ್ಚಿನ ಮಹಿಳೆಯರು ಪಕ್ಷೇತರರಾಗಿ ನಿಂತು ಠೇವಣಿ ಕಳೆದುಕೊಂಡಿದ್ದಾರೆ. ಗೆಲುವು ಸಾಧಿಸಿದ ಮಹಿಳೆಯರ ಪೈಕಿ ಕೇವಲ 9 ಮಂದಿ ಮಾತ್ರ ಬೆಂಗಳೂರಿನಿಂದ ಆಯ್ಕೆಯಾಗಿದ್ದಾರೆ.ಇವರಲ್ಲಿ ಮೂವರು ಮಹಿಳೆಯರು 2 ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಎಂದರೆ ಬೆಂಗಳೂರಿನಿಂಡ ಒಮ್ಮೆ ಶಾಸಕರಾಗಿ ಆಯ್ಕೆಯಾದ ಮಹಿಳೆಯರ ಸಂಖ್ಯೆ ಕೇವಲ 6 ಮಾತ್ರ!
2013 ರ ವಿಧಾನಸಭಾ ಚುನಾವಣೆಯಲ್ಲಿ, ಕೇವಲ ಆರು ಮಹಿಳಾ ಅಭ್ಯರ್ಥಿಗಳು ಶಾಸನಸಭೆಗೆ ಆಯ್ಕೆಯಾಗಿದ್ದು ಇದರಲ್ಲಿ ಇಬ್ಬರನ್ನು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಉಮಾಶ್ರೀ ಹಾಗೂ ಗೀತಾ ಮಹದೇವ ಪ್ರಸಾದ್ ಮಾತ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. 
ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಸಂದೀಪ್ ಶಾಸ್ತ್ರಿ ಹೇಳುವಂತೆ ಮಹಿಳಾ ಅಭ್ಯರ್ಥಿಗಳು ಗೆಲ್ಲಲಾರರು ಎನ್ನುವುದು ಸುಲ್ಳು.  ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ರಾಜಕೀಯ ಪಕ್ಷಗಳು ಸಿದ್ದವಿಲ್ಲ ಪುರುಷ ಅಭ್ಯರ್ಥಿಗಳ ಎದುರು ಮಹಿಲಾ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಅವರು ಸೋ;ಲು ಕಾಣುತ್ತಾರೆಂದು ಪಕ್ಷಗಳು ಭಾವಿಸಿದೆ.
"ಟಿಕೆಟ್ ಪಡೆಯುವ ವೇಳೆ ನಡೆಯುವ ಲಾಬಿ, ಮಹಿಳಾ ಅಭ್ಯರ್ಥಿಗಳ ಕೊರತೆ ಇದೆ ಎಂದು ಭಾವಿಸುವ ತಪ್ಪು ಕಲ್ಪನೆ, ಮಹಿಳೆಯರನ್ನು ರಾಜಕೀಯದೊಂದ ದೂರ್ ಮಾಡಿದೆ. ಬೆಂಗಳೂರಿನಲ್ಲಿ ನಡೆಯುವ ರಿಯಲ್ ಎಸ್ಟೇಟ್ ಲಾಬಿಯ ಕಾರಣದಿಂದ ಇಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯ ದೊರಕುತ್ತಿಲ್ಲ." ಅವರು ಹೇಳಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಮಹಿಳೆಯರಿಗೆ ಶೇ.33ಮೀಸಲಾತಿ ನೀಡುತ್ತದೆ. ಆದರೆ ಈ ಮಸೂದೆಯು ಲೋಕಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮಹಿಳೆಯರು ಯೋಗ್ಯ ಪ್ರಾತಿನಿದ್ಯ ಹೊಂದಲು ಇರುವ ಏಕೈಕ ಅಸ್ತ್ರ ಇದಾಗಿದೆ. ಆದರೆ ಮಸೂದೆ ಜಾರಿಯಾಗಿಲ್ಲ.
ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಸ್ಥಳೀಯ ಆಡಳಿತ ಮಟ್ಟದಲ್ಲಿ ಮಹಿಳೆಯರಿಗೆ ಶೇ.50 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಬಿಬಿಎಂಪಿ ಕೌನ್ಸಿಲ್ ಮೊದಲ ಬಾರಿಗೆ ಶೇ.50ಕ್ಕೂ ಹೆಚ್ಚು ಮಹಿಳಾ ಕೌನ್ಸಿಲರ್ ಗಳನ್ನು ಕಂಡಿತು. ಬೆಂಗಳೂರಿನ 198 ಕೌನ್ಸಿಲರ್ ಗಳಲ್ಲಿ 101 ಮಹಿಳೆಯರೂ ಸೇರಿದ್ದರು. ಇದರಲ್ಲಿ ಕೆಲವರು ಸಾಮಾನ್ಯ ಚುನಾವಣೆಯಲ್ಲಿ ಗೆದ್ದು ಬಂದವರಾಗಿದ್ದರು. ಮಹಿಲಾ ಮೇಯರ್ ಗಳ ಆಯ್ಕೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಇದೇ ಮೀಸಲಾತಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಹ್ಯವಾದ ವಾತಾವರಣವಿಲ್ಲ, ಚುನಾವಣೆ ಬಂತೆಂದರೆ ಪುರುಷ ಅಭ್ಯರ್ಥಿಗಳು ಮತದಾರರಿಗೆ ಹಣ, ಹೆಂಡಗಳನ್ನು ಹಂಚುತ್ತಾರೆ. ಯಾವ ಮಹಿಲಾ ಅಭ್ಯರ್ಥಿಗಳು ಈ ಕೆಲಸಕ್ಕೆ ಕೈ ಹಾಕುವುದಿಲ್ಲ. ಮಹಿಳೆಯರು ಪುರುಷರಷ್ಟು ಭ್ರಷ್ಠರಾಗಿಲ್ಲ ಎಂದು ಎರಡು ಬಾರಿ ಶಾಸಕರಾಗಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com