ರಾಷ್ಟ್ರಭಕ್ತಿ ನಂಬಿರುವ ಪಕ್ಷ ನಮ್ಮದು, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ನಮ್ಮ ಮಂತ್ರ: ಪ್ರಧಾನಿ ಮೋದಿ

ರಾಷ್ಟ್ರಭಕ್ತಿ ನಂಬಿರುವ ಪಕ್ಷ ನಮ್ಮ, ಸಬ್ ಕಾ ಸಾಥ್, ಸಬ್ ಕಾ ವಿಸಾಕ್ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...
ಕೊಪ್ಪಳದಲ್ಲಿ ಪ್ರಧಾನಿ ಮೋದಿ: ಬೃಹತ್ ಸಮಾವೇಶವನ್ನುದ್ದೇಶಿಸಿ ಭಾಷಣ
ಕೊಪ್ಪಳದಲ್ಲಿ ಪ್ರಧಾನಿ ಮೋದಿ: ಬೃಹತ್ ಸಮಾವೇಶವನ್ನುದ್ದೇಶಿಸಿ ಭಾಷಣ
Updated on: 
ಕೊಪ್ಪಳ: ರಾಷ್ಟ್ರಭಕ್ತಿ ನಂಬಿರುವ ಪಕ್ಷ ನಮ್ಮ, ಸಬ್ ಕಾ ಸಾಥ್, ಸಬ್ ಕಾ ವಿಸಾಕ್ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 
ಕೊಪ್ಪಳದಲ್ಲಿ ಬಿಜೆಪಿಯ ಬೃಹತ್ ಸಮಾವೇಶವನ್ನುದ್ದೇಶಿ ಪ್ರಧಾನಿ ಮೋದಿಯವರು ಮಾತನಾಡಿದ್ದು, ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. 
ರಾಷ್ಟ್ರಭಕ್ತಿ ನಂಬಿರುವ ಪಕ್ಷ ನಮ್ಮದು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ಆದರೆ, ಕಾಂಗ್ರೆಸ್ ಕೇವಲ ಕುಟುಂಬ ರಾಜಕಾರಣ ಮಾಡುತ್ತದೆ. ಒಂದು ಪರಿವಾರವೇ ದೇಶವನ್ನು 60 ವರ್ಷ ನಡೆಸಿದೆ. ಅವರು ಸರ್ಕಾರ ನಡೆಸಿದ್ದು, ಪರಿವಾರಕ್ಕಾಗಿ, ಸರ್ಕಾರ ಬೀಳಿಸಿದ್ದು ಕೂಡಾ ಪರಿವಾರಕ್ಕಾಗಿ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ಪಕ್ಷದ್ದು ವಿಕೃತ ರೂಪದ ರಾಜಕೀಯ. ತನ್ನ ಕುತಂತ್ರ ಬುದ್ಧಿಯಿಂದ ದೇಶದಲ್ಲಿ ವಿಷ ಬೀಜ ಬಿತ್ತುತ್ತಿದೆ. ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡುತ್ತದೆ. ಯಡಿಯೂರಪ್ಪ ಸರ್ಕಾರ ಇಲ್ಲಿನ ಸಂಸ್ಕೃತಿ ಉಳಿಸುವ ಕೆಲಸವನ್ನು ಮಾಡಿದ್ದರು. ಹಂಪಿ ಉತ್ಸವ ಆಚರಣೆ ಜಾರಿಗೆ ತಂದಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಮಕ್ಕಳ ಮನಸ್ಸಿನಲ್ಲಿಯೂ ಜಾತಿಯ ಬೀಜ ಬಿತ್ತುತ್ತಿದೆ. ಆ ಜಾತಿಯವರು ಪ್ರವಾಹ ಹೋಗಬೇಕು... ಈ ಜಾತಿಯವರು ಪ್ರವಾಸಕ್ಕೆ ಹೋಗಬಾರದು ಎಂಬ ಕೆಟ್ಟ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ. 
ಈ ಭಾಗದಲ್ಲಿ ಸಾಕಷ್ಟು ಐತಿಹಾಸಿಕ ಕೇಂದ್ರಗಳಿವೆ. ಜೈನಕಾಶಿಯಾಗಿದೆ ಕೊಪ್ಪಳ. ಇಂತಹ ಕ್ಷೇತ್ರಗಳಲ್ಲಿ ಉದ್ಧಾರ ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿಲ್ಲ. ಯಾವುದೇ ಸರ್ಕಾರಕ್ಕೆ ಇತಿಹಾಸ ಮುಖ್ಯ. ಈ ಭಾಗದ ಇತಿಹಾಸ ತಿಳಿದುಕೊಂಡಾಗ ಮಾತ್ರ ಉತ್ತಮ ಸರ್ಕಾರ ನೀಡಸು ಸಾಧ್ಯ. ಆದರೆ, ಕಾಂಗ್ರೆಸ್ ಇದಾವುದನ್ನೂ ಮಾಡಿಲ್ಲ. 
ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಮೇಲೆ ಐತಿಹಾಸಿಕ ಸ್ಥಳಗಳು ಪೂರ್ವಜರನ್ನು ನೆನಪು ಮಾಡಿಕೊಳ್ಳುಲು ರೂ.5ಕೋಟಿ ಖರ್ಚು ಮಾಡಿದ್ದೇವೆ. ಇದಕ್ಕಾಗಿ ನಾನು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಂದುಗಳೇ ಈ ಭಾಗದ ಜನತೆಗೆ ರಾಮಾಯಣದ ಇತಿಹಾಸ ಗೊತ್ತಿದೆ. ಇದರಲ್ಲಿ ಆನೆಗೊಂದಿ ಹಾಗೂ ಪಕ್ಕದ ಹಂಪಿಗೆ ಕೇಂದ್ರದ ಯಾತ್ರಾ ಯೋಜನೆ ಲಾಭವಾಗಲಿದೆ. 
ಈ ಕ್ಷೇತ್ರ ಭಗವಾನ್ ಹನುಮಾನ್ ಜನ್ಮಸ್ಥಳ. ಶ್ರೀರಾಮ ನೀಡಿದ ಮಹತ್ವದ ಸ್ಥಳ ಎಂಬುದು ನಿಮಗೆಲ್ಲಾ ಹೆಮ್ಮೆಯ ವಿಚಾರ. ಇಲ್ಲಿನ ಪ್ರವಾಸೀ ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಹವಾಯಿ ಚಪ್ಪಲಿ ಹಾಕುವವನು ವಾಯುಯಾನ ಮಾಡುವ ಅವಕಾಶವನ್ನು ನಮ್ಮ ಸರ್ಕಾರ ವ್ಯವಸ್ಥೆ ಮಾಡಿದೆ. ನಮ್ಮ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆಂದು ಹೇಳಿದ್ದಾರೆ. 
ಇದೇ ವೇಳೆ ಬಾಲಕಿ ಮಲ್ಲಮ್ಮ ನೆನೆದ ಪ್ರಧಾನಿ ಮೋದಿಯವರು, 2 ವರ್ಷದ ಹಿಂದೆ ಮನ್ ಕಿ ಬಾತ್ ನಲ್ಲಿ ಬಾಲಕಿ ಮಲ್ಲಮ್ಮ ಹೆಸರು ಪ್ರಸ್ತಾಪಿಸಿದ್ದೆ. ಶೌಚಾಲಯ ವಿಷಯದಲ್ಲಿ ಹೋರಾಟ ಮಾಡಿ ತನ್ನ ಕೆಲಸ ಈಡೇರಿಸಿಕೊಂಡಿದ್ದಳು. ಜನರ ಕಣ್ಣು ತೆರೆಸಿದ್ದಳು.
ಮಲ್ಲಮ್ಮ ಜನಿಸಿದ ಈ ನಾಡಿನಲ್ಲಿ ಸಹಸ್ರ ನಮನ ಸಲ್ಲಿಸುತ್ತೇನೆ. ಇಲ್ಲಿನ ಮಹಿಳೆಯರು ಶೌಚಾಲಯಕ್ಕೆ ಹೋಗಲು ಸಂಜೆವರೆಗೂ ಕಾಯಬೇಕಿತ್ತು. ಅವರ ಕಷ್ಟ ನನಗೆ ಅರ್ಥವಾಗುತ್ತದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಣ್ಣು ಮಕ್ಕಳು ಗರ್ಭದಲ್ಲಿಯೇ ಸಾಯುತ್ತಿದ್ದರು. ಆದರೆ, ನಮ್ಮ ಸರ್ಕಾರದ ಭೇಟಿ ಪಡಾವೋ, ಭೇಟಿ ಬಚಾವೋ ಆಂದೋಲನದಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಲಿಂಗ ಅನುಪಾತ ಸರಿ ಮಾಡುವ ಪ್ರಯತ್ನದಲ್ಲಿ ನಾವಿದ್ದೇವೆ.
ಸುಖನ್ಯ ಸಮೃದ್ಧಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಪ್ರಗತಿಗಾಗಿ ಹಣ ನೋಡುತ್ತಿದ್ದೇವೆ. ಹೆಣ್ಣು ಮಗು 18 ವರ್ಷಕ್ಕೆ ಬಂದಾಗ ಅವರ ಉನ್ನತ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಅವರ ಕೈಗೆ ನಾವು ನೀಡುತ್ತೇವೆ. ಕೊಪ್ಪಳದ ಗವಿ ಮಠ ಉನ್ನತವಾದ ಕಾರ್ಯವನ್ನು ಮಾಡಿದೆ. ನೀರಿನ ಉಳಿಕೆಯಲ್ಲಿ ರಾಜ್ಯ ಮೆಚ್ಚುವ ಕಾರ್ಯ ಮಾಡಿದ್ದಾರೆ. ಗವಿ ಮಠದ ಮೂಲಕ ಮಳೆ ನೀರನ್ನು ಸಂಗ್ರಹಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ವಿಚಾರ.
ಸ್ರ್ತೀ ಸ್ವಸಹಾಯ ಗುಂಪುಗಳಿಗೆ ರೂ.2 ಲಕ್ಷದವರೆಗೂ ಸಾಲವನ್ನು ಶೇ.1 ರಷ್ಟು ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಅದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೆ ತರಲಿದೆ. ಮಹಿಳಾ ಉದ್ಯಮಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತೇವೆ. ಇದು ನಾನು ನಿಮಗೆ ನೀಡುತ್ತಿರುವ ಭರವಸೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com