ಅಮಿತ್ ಶಾ ಬೆಂಗಳೂರಿಗೆ ತೆರಳಿದರು, ನಂತರ ಗುಳೇದ ಗುಡ್ಡದಲ್ಲಿ ಯಡಿಯೂರಪ್ಪ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಿದರು. ಬಳಿಕ ಬಿಎಸ್ ವೈ ಶಿಕಾರಿಪುರಕ್ಕೆ ತೆರಳಿದರು, ಅಲ್ಲಿ ಹುಚ್ಚರಾಯ ಸ್ವಾಮಿಯ ಆಶೀರ್ವಾದ ಪಡೆದು ಸಂಜೆ 5 ಗಂಟೆ ವರೆಗೂ ಮತ್ತೊಂದು ರೋಡ್ ಶೋನಲ್ಲಿ ಬಾಗವಹಿಸಿದರು, ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪ್ರದಾನಿ ಮೋದಿ ಅವರ ವಿರುದ್ಧ ಮಾತನಾಡುವ ಮುನ್ನ ರಾಹುಲ್ ಗಾಂಧಿ ಹಿಂದೂತ್ವ ಎಂದರೇ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲಿ, ಇಟಲಿಯಿಂದ ಬಂದವರಿಂದ ಹಿಂದೂ ಧರ್ಮದ ಬಗ್ಗೆ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಅಗತ್ಯ ವಿಲ್ಲ ಎಂದರು.