ಕರ್ನಾಟಕ: ಕಾಂಗ್ರೆಸ್ ಗೆ ಹೆಚ್ಚಿನ ಮತ ಪಾಲು, ಆದರೂ ಚುನಾವಣೆಯಲ್ಲಿ ಸೋಲು!

ಬಿಜೆಪಿ 104 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಶೇಕಡವಾರು ಮತಗಳಿಕೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಶೇ.38 ರಷ್ಟು ಮತಗಳನ್ನು ಪಡೆದುಕೊಂಡಿದೆ.
ಕಾಂಗ್ರೆಸ್  ಧ್ವಜ
ಕಾಂಗ್ರೆಸ್ ಧ್ವಜ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವೊಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಬಿಜೆಪಿ 104 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಶೇಕಡವಾರು ಮತಗಳಿಕೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಶೇ.38 ರಷ್ಟು ಮತಗಳನ್ನು ಪಡೆದುಕೊಂಡಿದೆ.

ಬಿಜೆಪಿಯ ಶೇಕಡವಾರು ಮತಗಳಿಕೆ ಶೇ.32 ರಷ್ಟು ಆಗಿದೆ.  ಕಾಂಗ್ರೆಸ್   ಪರ 1 ಕೋಟಿ 38 ಲಕ್ಷ ಸಾವಿರದ 2015 ಮಂದಿ ಮತ ಚಲಾಯಿಸಿದ್ದರೆ , ಬಿಜೆಪಿಯ ಪರ 1 ಕೋಟಿ 31 ಲಕ್ಷದ 59 ಸಾವಿರದ 117 ಮಂದಿ ಮತ ಚಲಾಯಿಸಿದ್ದಾರೆ. 78 ಸ್ಥಾನಗಳನ್ನು ಗೆದ್ದಿದ್ದರೂ  ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ  ಜೆಡಿಎಸ್ ನೊಂದಿಗೆ ಮೈತ್ರಿಗೆ ಮುಂದಾಗಿದೆ.

ಬಿಜೆಪಿಗಿಂತಲೂ ಕಡಿಮೆ ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆದುಕೊಂಡಿದೆ. ಹಲವು ಸ್ಥಾನಗಳಲ್ಲಿ, ಕಾಂಗ್ರೆಸ್ ಜೆಡಿಯು (ಎಸ್) ಯೊಂದಿಗೆ ನೇರ ಸ್ಪರ್ಧೆಯಲ್ಲಿತ್ತು,  ಅಲ್ಲಿ ಬಿಜೆಪಿ ಅಸ್ತಿತ್ವವೇ ಇರಲಿಲ್ಲ.  ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ ಇದ್ದ ಕಡೆಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಲಾಭವಾಗಿದೆ.

ಕಾಂಗ್ರೆಸ್  ಮತ್ತಿತರ ಪಕ್ಷಗಳ ನಡುವೆ ಮತಗಳು ಚದುರಿ ಹೋಗಿದ್ದರೂ , ಹಳೆಯ ಪಕ್ಷಕ್ಕೆ ದೊಡ್ಡ ಪ್ರಮಾಣದ  ಮತಗಳು ಬಿದ್ದಿವೆ. ಬಿಜೆಪಿಗೆ ಹೋಲಿಸಿದ್ದರೆ  ಹಳೆ ಮೈಸೂರು ಭಾಗದಲ್ಲಿ ನೈಜ ಪ್ರಮಾಣದ ಮತಗಳಿಕೆಯಾಗಿಲ್ಲ. ಜೆಡಿಎಸ್  ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಹೆಜ್ಜೆ ಇಟ್ಟಕ್ಕೂ ಸಹ ಆಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ವಲಯದಲ್ಲಿಯೂ ಮತಗಳಿಕೆಯಲ್ಲಿ ಹೆಚ್ಚಾಗಿದೆ. ಆದರೆ, ಇದು ಸ್ಥಾನಗಳಾಗಿ ಬದಲಾಗಿಲ್ಲ.

 ಬಿಜೆಪಿ ಬೆಂಗಳೂರು ನಗರ, ಮಧ್ಯ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಜೆಡಿಎಸ್  ಹಳೇ ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com