'ಪ್ರಧಾನಿ ಮೋದಿ ಯಾವಾಗಲೂ ಮನ್ ಕೀ ಬಾತ್ , ಮನ್ ಕೀ ಬಾತ್ ಎನ್ನುತ್ತಾರೆ. ಆದರೆ ಅವರು ಕಾಮ್ ಕೀ ಬಾತ್ ಮಾತನಾಡುವುದೇ ಇಲ್ಲ. ಇನ್ನು ಯಡಿಯೂರಪ್ಪನವರು ಹಸಿರು ಶಾಲು ಹಾಕಿ ಡೋಂಗಿತನದಲ್ಲಿ ನಾನು ಮಣ್ಣಿನ ಮಗ ಎನ್ನುತ್ತಾರೆ. ನಾವ್ಯಾರು ಮಣ್ಣಿನ ಮಕ್ಕಳಲ್ವಾ. ಯಡಿಯೂರಪ್ಪ ಅವರು 4 ವರ್ಷ ಲೋಕಸಭಾ ಸದಸ್ಯರಾಗಿದ್ದ ವೇಳೆ ಒಂದು ದಿನವಾದರೂ ಸಾಲ ಮನ್ನಾ ಮಾಡುವ ಕುರಿತು ಪ್ರಧಾನಿ ಬಳಿ ಬಾಯಿ ಬಿಟ್ಟಿದ್ದಾರಾ. ಸಾಲಮನ್ನಾ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದರು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗಲಾದರೂ ಸಾಲಮನ್ನಾ ಬಗ್ಗೆ ಮಾತನಾಡುತ್ತಿದ್ದೀರಾ.. ಸುಳ್ಳು ಯಡಿಯೂರಪ್ಪ ಅವರ ಮನೆ ದೇವರು, ಬರಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ ಎಂದು ಕಿಡಿಕಾರಿದರು.