ಇದೇ ವೇಳೆ, ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊಟ್ಟೆಕಿಚ್ಚಿನಿಂದ ಚಾಮುಂಡೇಶ್ವರಿಯಲ್ಲಿ ಸೋಲಿಸಿದರು. ನಾನು ಅದಕ್ಕೆ ರಾಹು, ಕೇತು, ಶನಿ ಎಲ್ಲರೂ ಸೇರಿಕೊಂಡು ನನ್ನನ್ನು ಸೋಲಿಸಿದರು ಅಂತ ಹಿಂದೆ ಹೇಳಿದ್ದೀನಿ. ಆದರೆ ಬದಾಮಿ ಜನ ನನ್ನ ಕೈ ಹಿಡಿದರು. ಮತ್ತೆ ರಾಜಕೀಯ ಶಕ್ತಿ ತುಂಬಿದರು. ನನ್ನನ್ನು ಸೋಲಿಸೋದಕ್ಕೆ ಕಾರಣ ಹೊಟ್ಟೆ ಕಿಚ್ಚು ಎಂದರು.