ಆಸ್ಪತ್ರೆಗೆ ಭೇಟಿ ನೀಡಿ ಡಿಕೆಶಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಸಿಎಂ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ದಿಢೀರ್ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿ,....
ಡಿ ಕೆ ಶಿವಕುಮಾರ್ - ಎಚ್ ಡಿ ಕುಮಾರಸ್ವಾಮಿ
ಡಿ ಕೆ ಶಿವಕುಮಾರ್ - ಎಚ್ ಡಿ ಕುಮಾರಸ್ವಾಮಿ
Updated on: 
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ ದಿಢೀರ್ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರ ಆರೋಗ್ಯ ವಿಚಾರಿಸಿದರು. 
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ಇದ್ದ ಸಿಎಂ, ಡಿಕೆಶಿ ಜತೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತೂ ಚರ್ಚೆ ನಡೆಸಿದ್ದಾರೆ.
ನಾವು ಸ್ವಲ್ಪ ಯಾಮಾರಿದರೂ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಬಿಜೆಪಿ ಸರ್ಕಾರವನ್ನು ಬೀಳಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ನಮ್ಮ ಸರ್ಕಾರದ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಯಾವುದೇ ಕಾರಣಕ್ಕೂ ನಾವು ಯಾಮಾರಬಾರದು ಎಂದು ಡಿಕೆಶಿಗೆ ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ದಾಖಲಿಸಿರುವ ಎಫ್​ಐಆರ್​ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು. 
ವಿಚಾರಣೆ ಹೆಸರಲ್ಲಿ ಇಡಿ ಅಧಿಕಾರಿಗಳು ವಿನಾಕಾರಣ ಟಾರ್ಚರ್​ ಕೊಡುತ್ತಾರೆ ಎಂದು ಡಿಕೆಶಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಚ್​ಡಿಕೆ ನೀವು ಯಾವುದಕ್ಕೂ ಹೆದರಬೇಡಿ, ನಿಮ್ಮ ಜತೆ ನಾವಿದ್ದೇವೆ. ಕಾನೂನು ಹೋರಾಟವನ್ನು ಸ್ಟ್ರಾಂಗ್​ ಮಾಡಿ, ಎಲ್ಲವೂ ಸರಿಯಾಗುತ್ತದೆ. ನಾವು ಇದಕ್ಕೆ ಕೌಂಟರ್​ ಕೊಡಲು ಪ್ಲ್ಯಾನ್​ ಮಾಡೋಣ ಎಂದು ಧೈರ್ಯ ತುಂಬಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com