ಬೆಂಗಳೂರು: ಗಡಿನಿಯಂತ್ರಣ ರೇಖೆಯಾಚೆ ಇರುವ ಬಾಲಾಕೋಟ್ ಪ್ರದೇಶದಲ್ಲಿರುವ ಉಗ್ರರ ಶಿಬಿರಗಳನ್ನು ನಾಶ ಮಾಡಿದ್ದ ವಾಯುಸೇನೆಯ ಕಾರ್ಯಾಚರಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘಿಸಿ ಟ್ವೀಟ್ ಮಾಡಿದ್ದರು.
ಭಾರತೀಯ ವಾಯುಪಡೆ ಬಾಗಲಕೋಟೆ ಪ್ರದೇಶದಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿದೆ ಎಂದು ಸಿದ್ದರಾಮಯ್ಯ ಅವವರ ಖಾತೆಯಲ್ಲಿ ನಕಲಿ ಟ್ವೀಟ್ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಿಸಲಾಗುತ್ತಿದೆ.
ತಮ್ಮ ಟ್ವಿಟರ್ ಹ್ಯಾಂಡಲ್ ಬಳಸಿಕೊಂಡು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ತಪ್ಪು ಸಂದೇಶದ ಟ್ವೀಟ್ ಸೃಷ್ಟಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವರು ಹಾಗೂ ಬೆಂಗಳೂರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ''ನನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಬಳಸಿಕೊಂಡಿರುವ ಟ್ರೋಲ್ ಸಿಸ್ಯಂದಿರು ಎಂಬ ಲಾಂಛನ ಹೊಂದಿದವರು ಟ್ವೀಟ್ ಸೃಷ್ಟಿಸಿದ್ದಾರೆ. ಇಂಥವರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳಬೇಕು,'' ಎಂದು ಒತ್ತಾಯಿಸಿದ್ದಾರೆ.
Morphed tweets with my official handle are being circulated in social media by few unethical users. This image has a logo of a group 'Troll Sisyandru'. I urge @BlrCityPolice to take immediate action against those involved &I also request Shri. @MBPatil to look into the issue. pic.twitter.com/3Ddm9AuvBT