ಅತೃಪ್ತ ಶಾಸಕರು ನೀಡಿರುವ ರಾಜಿನಾಮೆಯನ್ನು ತುರ್ತಾಗಿ ಅಂಗೀಕರಿಸಲು ಸಾಧ್ಯವಿಲ್ಲ, ಸಂವಿಧಾನದ ಪ್ರಕಾರ, ನೀತಿ ನಿಯಮದ ಪ್ರಕಾರ ಶಾಸಕರ ಖುದ್ದು ಭೇಟಿಯಾಗಿ ರಾಜಿನಾಮೆ ನೀಡಬೇಕ, ಆ ನಂತರ ಅಂಗೀಕಾರ ಪ್ರಕ್ರಿಯೆ ನಡೆಸಲಿದ್ದೇನೆ, ಪ್ರತಿಯೊಬ್ಬ ಅತೃಪ್ತ ಶಾಸಕರನ್ನು ಕರೆದು ಮಾತನಾಡಿ ಚರ್ಚಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.