ರೈತರು ಈಗಾಗಲೇ ತೊಂದರೆಯಲ್ಲಿದ್ದಾರೆ. ಪ್ರಸ್ತಾವಿತ ಗ್ರಾಮ ವಾಸ್ತವ್ಯ ವಿರೋಧ ಪಕ್ಷಗಳಿಗೆ ಮೈತ್ರಿ ಸರ್ಕಾರ ತಾನೇ ತಾನಾಗಿ ನಿಡುವ ಇನ್ನೊಂದು ಅಸ್ತ್ರವಾಗಲಿದೆ.ಬಿಜೆಪಿ ವಕ್ತಾರ ಜಿ. ಮಧುಸೂದನ್ ಹೇಳಿದಂತೆ " ಕುಮಾರಸ್ವಾಮಿಗೆ ನೈತಿಕತೆ ಇಲ್ಲ ಅವರ ಸಾಲ ಮನ್ನಾ ಭರವಸೆಗಳು "ಫ್ಲಾಪ್ ಶೋ" ಆಗಿವೆ. ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಒಂದು ದಿನ ಉಳಿಯುವಿಕೆ ಮುಖ್ಯವಾಗಿರುವುದಿಲ್ಲ. ಇದುವರೆಗೆ ಅವರು 42 ಸಾವಿರ ಕೋಟಿ ರೂ. ಸಾಲ ಮನ್ನಾ ಭರವಸೆ ನೀಡಿದ್ದು ಕೇವಲ 3 ಸಾವಿರ ಕೋಟಿ ರೂ ಮನ್ನಾ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ತಮ್ಮ ಕಾರ್ಯಕ್ರಮದ ವೈಫಲ್ಯದ ಬಗೆಗೆ ಸ್ಪಷ್ಟ ಕಾರಣ ಹಾಗೂ ಉತ್ತರದೊಡನೆ ಗ್ರಾಮಕ್ಕೆ ತೆರಳಬೇಕು. ಸಿಎಂ ಕುಮಾರಸ್ವಾಮಿ ರಾಜ್ಯಾಡಳಿತ ನಡೆಸುವ ಬದಲು ಪ್ರತಿದಿನವೂ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುತ್ತಾ ಇದ್ದಾರೆಂದು ಕಾಣುತ್ತಿದೆ.ನೀತಿ ಸಂಹಿತೆ ತೆಗೆದ ನಂತರವೂ ಆಡಳಿತ ಯಂತ್ರ ಸ್ಥಗಿತವಾಗಿದೆ.ಮಂತ್ರಿಗಳು, ಅಧಿಕಾರಿಗಳು ಬರಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಂಡಿಲ್ಲ. ಜನರಲ್ಲಿ ವಿಶ್ವಾಸವನ್ನು ಹುಟ್ಟುಹಾಕಲು ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಬರಗಾಲ ಪರಿಹಾರ ಕಾರ್ಯವನ್ನು ಜಾರಿ ಸಂಬಂಧ ಪರಿಶೀಲನೆಗೆ ಮುಂದಾಗಿಲ್ಲ.. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ರಾಜ್ಯದಲ್ಲಿ ವ್ಯಾಪಕ ಪ್ರವಾಸ ಮಾಡಿದ್ದಾರೆ. ರೈತರು, ಶಿಕ್ಷಣತಜ್ಞರು ಮತ್ತು ಇತರರೊಂದಿಗೆ ಪರಸ್ಪರ ಸಂವಹನ ನಡೆಸುತ್ತಿದ್ದಾರೆ ಮತ್ತು ಅವರು ರೈತರ ಸಾಲ ಮನ್ನಾಗೆ ಪ್ರ`ಣಾಳಿಕೆಯಲ್ಲಿ ಆದ್ಯತೆ ನೀಡಿದ್ದು ಇದರ ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ ಎಂದು ಇನ್ನೊಂದು ವಾದವಿದೆ.