ಕಲಬುರ್ಗಿ: ಕಳೆದ ಐದು ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಬಹಿರಂಗ ಚರ್ಚೆಗೆ ಆಗಮಿಸಬೇಕು ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಸವಾಲು ಹಾಕಿದ್ದಾರೆ.
"ಕಾವಲುಗಾರನೇ ಕಳ್ಳನಾದರೆ ನಿಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸುವವರಾರು?ಒಂದು ವೇಳೆ ನರೇಂದ್ರ ಮೋದಿಯವರಿಗೆ ನಿಜವಾಗಿ ಧೈರ್ಯವಿದ್ದರೆ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಜತೆಗೆ ಬಹಿರಂಗವಾಗಿ ಚರ್ಚೆಗೆ ಆಗ್ಮೈಸಲಿ" ಹರಿಪ್ರಸಾದ್ ಹೇಳಿದ್ದಾರೆ.
"ಪ್ರಧಾನಿಯಾದಂದಿನಿಂದ ಮೋದಿ ಇಂದಿನವರೆಗೆ ಯಾವುದೇ ಪತ್ರಿಕಾಗೋಷ್ಠಿ ನಡೆಸಿಲ್ಲ. ಅವರಿಗೆ ತಾಖತ್ ಇದ್ದದ್ದಾದರೆ ಈಗಲೇ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿ ತೋರಿಸಲಿ" ಅವರು ಹೇಳಿದ್ದಾರೆ.