ನಾನು ಸನ್ಯಾಸಿಯಲ್ಲ: ವಿಶೇಷ ಸಂದರ್ಶನದಲ್ಲಿ ರೋಷನ್ ಬೇಗ್ ಮಾರ್ಮಿಕ ನುಡಿ
ನಾನೇನೂ ಸನ್ಯಾಸಿಯಲ್ಲ, ಆದರೆ ಈ ಕ್ಷಣದಲ್ಲಿ ನಾನು ಇನ್ನೂ ಕಾಂಗ್ರೆಸ್ ನಲ್ಲಿದ್ದೇನೆ ಎಂದು ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದ ಹಿರಿಯ ಕಾಂಗ್ರೆಸಿಗ ರೋಷನ್ ಬೇಗ್ ಹೇಳಿದ್ದಾರೆ.
ಬೆಂಗಳೂರು: ನಾನೇನೂ ಸನ್ಯಾಸಿಯಲ್ಲ, ಆದರೆ ಈ ಕ್ಷಣದಲ್ಲಿ ನಾನು ಇನ್ನೂ ಕಾಂಗ್ರೆಸ್ ನಲ್ಲಿದ್ದೇನೆ ಎಂದು ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದ ಹಿರಿಯ ಕಾಂಗ್ರೆಸಿಗ ರೋಷನ್ ಬೇಗ್ ಹೇಳಿದ್ದಾರೆ.
ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಾಜಿ ಸಚಿವ ಬೇಗ್ "ನೀವೇನಾದರೂ ಬಿಜೆಪಿಯನ್ನು ಸೇರುವ ಸಂಭವನೀಯತೆ ಇದೆಯೆ?" ಎಂದು ಪ್ರಶ್ನಿಸಲು "ನಾನೇನೂ ಸನ್ಯಾಸಿಯಲ್ಲ, ಆದರೆ ತಕ್ಷಣಕ್ಕೆ ನಾನೊಬ್ಬ ಕಾಂಗ್ರ್ಸಿಗನಾಗಿದ್ದೇನೆ" ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಚುನಾವಣೆ ಫಲಿತಾಂಶಕ್ಕೆ ಮುನ್ನ ಕಾಂಗ್ರೆಸ್ ನ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ಮ್ ವೇಣುಗೋಪಾಲ್ ಸೇರಿ ಹಲವು ನಾಯಕರನ್ನು ಟೀಕಿಸಿದ್ದ ಬೇಗ್ ಫಲಿತಾಂಶದ ನಂತರ ನಿಯೋಜಿತ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿ ಸರಣಿ ಟ್ವಿಟ್ ಮಾಡಿದ್ದರು.
ರೋಷನ್ ಬೇಗ್ ಸಂದರ್ಶನದ ಪ್ರಮುಖ ಅಂಶಗಳು ಹೀಗಿದೆ-
ನೀವೇಕೆ ಮೋದಿಯವರನ್ನು ಪ್ರಶಂಸಿಸಿದ್ದೀರಿ?
ಅದರಲ್ಲಿ ತಪ್ಪೇನಿದೆ? ನಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಅವರನ್ನು ಪ್ರಶಂಸಿಸಿದ್ದಾರೆ. ಅವರು ಇಂತಹ ದೊಡ್ಡ ಆದೇಶವನ್ನು ಸ್ವೀಕರಿಸಿದ್ದಾರೆ. ನಾನುಹೇಳಬಾರದ್ದನ್ನೇನೂ ಹೇಳಿಲ್ಲವಲ್ಲ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ.
ಬಿಜೆಪಿ ಮುಖಂಡರಾದ ಮುಕ್ತರ್ ಅಬ್ಬಾಸ್ ಮತ್ತು ಶಾನವಾಜ್ ಹುಸೈನ್ ಅವರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿದ್ದೀರಿ ಎಂದು ಹೇಳಲಾಗುತ್ತಿದೆ?
ನಾನು ರಾಜೀವ್ ಪ್ರತಾಪ್ ರೂಡಿ ಸೇರಿ ಎಲ್ಲರೊಡನೆ ಸಂಪರ್ಕದಲ್ಲಿದ್ದೇನೆ. ಬೆಂಗಳೂರಿನಲ್ಲಿ ಹಜ್ ಹೌಸ್ ಉದ್ಘಾಟಿಸಿದಾಗ ಬಿಜೆಪಿ ಮುಖ್ತಾರ್ ಅಬ್ಬಾಸ್ ಉಪಸ್ಥಿತರಿದ್ದರು ಮತ್ತು ನಾವು ವೇದಿಕೆ ಹಂಚಿಕೊಂಡಿದ್ದೇವೆ. ಆಗಿನ ಸಚಿವ ಡಿ.ವಿ. ಸದಾನಂದ ಗೌಡ ಅವರುಹಜ್ ಹೌಸ್ ಗಾಗಿ ಸರ್ಕಾರದಿಂದ 40 ಕೋಟಿ ರೂ.ನೆರವನ್ನು ನೀಡಿದ್ದರು.
ಮುಸ್ಲಿಮರು ತಮ್ಮ ಬೆಂಬಲವನ್ನು ಕಾಂಗ್ರೆಸ್ ಗೆ ಮಾತ್ರ ನೀಡುವಂತೆ ನಿರ್ಬಂಧಿಸಬಾರದು ಎಂದು ನೀವು ಹೇಳೀದ್ದಿರಿ?
ಯಾವುದೇ ಪಕ್ಷ ಬಿಜೆಪಿಯ ಬಗ್ಗೆ ಮುಸ್ಲಿಮರನ್ನು ಹೆದರಿಸಲು ಸಾಧ್ಯವಿಲ್ಲ ಮತ್ತು ಅವರು ತಮ್ಮ ಮತಗಳನ್ನು ಯಾವುದೇ ಪಕ್ಷಕ್ಕೂ ನೀಡಲು ಸ್ವತಂತ್ರರು.
ಕಾಂಗ್ರೆಸ್ ನಿಂದ ನಿಮಗೆ ನೋಟೀಸ್ ನೀಡಲಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ ವಿರುದ್ಧ ಬಹಿರಂಗವಾಗಿ ಪ್ರಚಾರ ಮಾಡಿದ ಕೋಲಾರ ಕಾಂಗ್ರೆಸ್ ಶಾಸಕರಿಗೆ ಯಾವುದೇ ನೋಟೀಸ್ ಇಲ್ಲ. ಮಂಡ್ಯದಲ್ಲಿ ಸಮ್ಮಿಶ್ರ ಅಭ್ಯರ್ಥಿ ವಿರುದ್ಧ ಸ್ಪರ್ಧೆ ನಡೆಸಿದ ನರೇಂದ್ರ ಸ್ವಾಮಿ ಮತ್ತು ಚೆಲುವಾಯಯ ಸ್ವಾಮಿ ಅವರಿಗೆ ಯಾವುದೇ ನೋಟೀಸ್ ಅಥವಾ ಎಚ್ಚರಿಕೆ ನಿಡಿಲ್ಲ. ಅಲ್ಲಿ ಮೈತ್ರಿ ಅಭ್ಯರ್ಥಿ ಸೋಲೊಪ್ಪಿದ್ದಾರೆ. ತುಮಕೂರಿನಲ್ಲಿ ದೇವೇಗೌಡರ ವಿರುದ್ಧ ಕೆಲಸ ಮಾಡಿದವರಿಗೆ ಸಹ ಯಾವ ನೋಟೀಸ್ ಕೊಟ್ಟಿಲ್ಲ.
ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎಂಬ ಹಲವು ನಾಯಕರ ಧೋರಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಮತ್ತು ಇದು ಹಾಗೆಯೇ ಉಳಿಯಲಿದೆ. ಎಂದು ಸಚಿವ ಪುಟ್ಟರಂಗ ಶೆಟ್ಟಿ ಸಭೆಯೊಂದರಲ್ಲಿ ಹೇಳಿದ್ದಾರೆ.ಈ ರೀತಿಯ ಹೇಳಿಕೆ ಯಾವ ಸಂದೇಶವನ್ನು ಕಳುಹಿಸುತ್ತದೆ? ಕುಮಾರಸ್ವಾಮಿಮುಖ್ಯಮಂತ್ರಿಯಾಗಿರುವಾಗ ನೀವು ಹೇಗೆ ಒಕ್ಕೂಟದ ಸರ್ಕಾರವನ್ನು ನಡೆಸುತ್ತೀರಿ? 'ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ' ಎಂದು ಘೊಷಿಸುವುದು ಎಷ್ತರ ಮಟ್ಟಿಗೂ ಸರಿಯಾಗಿ ಕಾಣಿಸುವುದಿಲ್ಲ.
ನೀವು ನಾಯಕರನ್ನು ಬಹಿರಂಗವಾಗಿ ಟೀಕಿಸಿದ್ದೀರಿ?
ನಾನು ಹೊಸದನ್ನು ಹೇಳುತ್ತಿಲ್ಲ. ನಾನು ಕಾಂಗ್ರೆದ್ ನ ರ್ಯಾಂಕ್ ಹಾಗೂ ಫೈಲ್ ಗಳ ಬಗೆಗೆ ಕಳವಳ ವ್ಯಕ್ತಪಡಿಸಿದ್ದೇನೆ. ಕಾಂಗ್ರೆಸ್ ನಲ್ಲಿ ಅನೇಕ ಸ್ಥಳೀಯ ಮುಖಂಡರನ್ನು ಕಡೆಗಣಿಸಲಾಗಿದೆ. ನಾನು ಪಕ್ಷದ ಕಾರ್ಯಕರ್ತರ ಕಳವಳವನ್ನು ಬಿಚ್ಚಿಟ್ಟಿದ್ದೇನೆ.