

ಬೆಂಗಳೂರು: ಮುಂದಿನ ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ನಡೆಯಲಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ರಾಜ್ಯ ಕಾಂಗ್ರೆಸ್ ಪಾಳಯ ಸಜ್ಜಾಗಿದೆ. ಜಾತ್ಯಾತೀತ ಜನತಾದಳದೊಡನೆ ಮೈತ್ರಿ ಮುರಿದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿರುವ ಕೈ ಪಡೆ ಎಂಟು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದೆ.
ಅಭ್ಯರ್ಥಿಗಳ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿಸಿದ್ದಾರೆ
ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ಒಪ್ಪಿಗೆಯ ಮೇರೆಗೆ ಕರ್ನಾಟಕದ 8 ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಟ್ವಿಟ್ತರ್ ಖಾತೆಯಲ್ಲಿ ಹೇಳಿದೆ.
ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಹೀಗಿದೆ-
ಭೀಮಣ್ಣ ನಾಯಕ್- ಯಲ್ಲಾಪುರ
ಬಿ.ಎಚ್.ಬನ್ನಿಕೋಡ- ಹಿರೇಕೆರೂರು
ಕೆ.ಬಿ.ಕೋಳಿವಾಡ- ರಾಣಿಬೆನ್ನೂರು
ಎಂ.ಆಂಜನಪ್ಪ- ಚಿಕ್ಕಬಳ್ಳಾಪುರ
ಎಂ.ನಾರಾಯಣಸ್ವಾಮಿ- ಕೆ.ಆರ್.ಪುರ
ಎಂ.ಶಿವರಾಜ್- ಮಹಾಲಕ್ಷ್ಮಿ ಲೇಔಟ್
ಪದ್ಮಾವತಿ ಸುರೇಶ್- ಹೊಸಕೋಟೆ
ಎಚ್.ಪಿ.ಮಂಜುನಾಥ್- ಹುಣಸೂರು
ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಡಿಸೆಂಬರ್ ಐದರಂದು ಉಪಚುನಾವಣೆ ಮತದಾನ ನಡೆಯಲಿದೆ. ನವೆಂಬರ್ 11ರಂದು ಅಧಿಸೂಚನೆ ಹೊರಬೀಳಲಿದ್ದು ನಾಮಪತ್ರ ಸಲ್ಲಿಕೆಗೆ ನವೆಂಬರ್ 18 ಕಡೇ ದಿನ. ನವೆಂಬರ್ 19 ನಾಮಪತ್ರ ಪರಿಶೀಲನೆ ನಡೆಯಲಿದ್ದು ನಾಮಪತ್ರ ಹಿಂಪಡೆಯಲು ನವೆಂಬರ್ 21 ಕಡೇ ದಿನವಾಗಿದೆ.ಡಿಸೆಂಬರ್ 5ರಂದು ನಡೆವ ಮತದಾನದ ಫಲಿತಾಂಶ ಡಿಸೆಂಬರ್ 9ರಂದು ಹೊರಬೀಳಲಿದೆ.