ಜನ ಸಂಕಷ್ಟದಲ್ಲಿರುವಾಗ ಪಕ್ಷದ ಹಣವನ್ನು ಬ್ಯಾಂಕ್ ಅಲ್ಲಿ ಮರಿ ಹಾಕಲು ಬಿಡುವುದು ಸರಿಯೇ: ರಾಜಕೀಯ ಪಕ್ಷಗಳಿಗೆ ಇರಿದ ಉಪೇಂದ್ರ

ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಹಣವನ್ನು ಬ್ಯಾಂಕಿನಲ್ಲಿ ಮರಿ ಹಾಕಲು ಬಿಟ್ಟಿರುವುದು ಎಷ್ಟು ಸರಿ ಎಂದು ಖ್ಯಾತ ನಟ ನಿರ್ದೇಶಕ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಹಣವನ್ನು ಬ್ಯಾಂಕಿನಲ್ಲಿ ಮರಿ ಹಾಕಲು ಬಿಟ್ಟಿರುವುದು ಎಷ್ಟು ಸರಿ ಎಂದು ಖ್ಯಾತ ನಟ ನಿರ್ದೇಶಕ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಕರ್ನಾಟಕ ಪ್ರವಾಹದ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ, ಜನರಿಂದಲೇ ಕೋಟಿ ಕೋಟಿ ಪಕ್ಷ ನಿಧಿ ಸಂಗ್ರಹಿಸುವ ಎಲ್ಲ ರಾಜಕೀಯ ಪಕ್ಷಗಳು ಆ ಹಣವನ್ನು ಕೇವಲ ಚುನಾವಣೆ ಸಮಯದಲ್ಲಿ ತಮ್ಮ ಪಕ್ಷದ ಜಾಹಿರಾತುಗಳಿಗೆ ಹಾಗೂ ದೊಡ್ಡ ಸಭೆ ಸಮಾರಂಭಗಳಿಗೆ ಮಾತ್ರ ಖರ್ಚು ಮಾಡಿ, ಜನರು ಕಷ್ಟದಲ್ಲಿರುವಾಗ ಆ ದುಡ್ಡನ್ನು ಬ್ಯಾಂಕ್ ನಲ್ಲಿ ಮರಿ ಹಾಕಲು ಬಚ್ಚಿಟ್ಟಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಉಪೇಂದ್ರ ಅವರ ಈ ಟ್ವೀಟ್ ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಇವೆಲ್ಲ ಜನರಿಗೆ ಅರ್ಥವಾಗಲ್ಲ. ಅರ್ಥವಾದವರು ಮೌನಕ್ಕೆ ಶರಣಾಗುತ್ತಾರೆ ಎಂದು ಟೀಕೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com