ಉಪಚುನಾವಣೆ: ಪ್ರವಾಹದಿಂದ ನಷ್ಟ, ಗೋಕಾಕ್ ಕಂಬಾರ ಸಮುದಾಯಕ್ಕೆ ಭಾರೀ ಭರವಸೆ ನೀಡಿದ ಅಭ್ಯರ್ಥಿಗಳು

ಪ್ರವಾಹದಿಂದ ಎದುರಾದ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಗೋಕಾಕ್ ಕಂಬಾರ ಸಮುದಾಯಕ್ಕೆ ಉಪಚುನಾವಣೆ ವೇಳೆ ಮೂರೂ ಪಕ್ಷಗಳ ಅಭ್ಯರ್ಥಿಗಳು ಭಾರೀ ಭರವಸೆಗಳನ್ನು ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗೋಕಾಕ್: ಪ್ರವಾಹದಿಂದ ಎದುರಾದ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಗೋಕಾಕ್ ಕಂಬಾರ ಸಮುದಾಯಕ್ಕೆ ಉಪಚುನಾವಣೆ ವೇಳೆ ಮೂರೂ ಪಕ್ಷಗಳ ಅಭ್ಯರ್ಥಿಗಳು ಭಾರೀ ಭರವಸೆಗಳನ್ನು ನೀಡಿದ್ದಾರೆ. 

ಪ್ರವಾಹದಿಂದ ಕಂಬಾರ ಸಮುದಾಯಕ್ಕೆ ರೂ.2.5 ಕೋಟಿ ನಷ್ಟದಿಂದ ಸಂಕಷ್ಟಕ್ಕೆ ಸಿಲುಕ್ಕಿದ್ದು, ರೂ.3.5 ಲಕ್ಷದಷ್ಟು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಸಂಪೂರ್ಣವಾಗಿ ನಾಶಗೊಂಡಿವೆ. ಪರಿಣಾಮ ಕಂಬಾರ ಸಮುದಾಯ 300 ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿವೆ. ಸಂಕಷ್ಟದಲ್ಲಿರುವ ಈ ಸಮುದಾಯ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಗಣೇಶ ಮೂರ್ತಿಗಳನ್ನು ವಿತರಿಸುತ್ತಿದೆ. 

ಪ್ರವಾಹದಿಂದ ಕಂಬಾರ ಸಮುದಾಯ ಈ ಮಟ್ಟಕ್ಕೆ ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲು. ಪ್ರಸ್ತುತ ಎದುರಾಗಿರುವ ನಷ್ಟವನ್ನು ಸರಿಪಡಿಸಿಕೊಳ್ಳಬೇಕಾದರೆ ಸಮುದಾಯಕ್ಕೆ 4 ವರ್ಷ ಕಾಲಾವಕಾಶ ಬೇಕಾಗುತ್ತದೆ. 

ಇಟ್ಟಂಗಿ ಮತ್ತು ಕಬಾಂರಿಕೆ ಸಮಗ್ರ ಉತ್ಪಾದಕ ಸಹಕಾರಿ ಸಂಘ (ಕೆಎಸ್ಐಎಂಕೆಎಸ್'ಯುಎಸ್ಎಸ್) ಮುಖ್ಯಸ್ಥ ಮಾತನಾಡಿ, ಕಂಬಾರ ಸಮುದಾಯಕ್ಕೆ ಸೇರಿದ 300 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ನಷ್ಟವನ್ನು ಸರಿಪಡಿಸಿಕೊಳ್ಳಲು ವರ್ಷಗಳೇ ಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಕ್ಷೇತ್ರಕ್ಕೆ ಬರುವ ಮೂರು ಪಕ್ಷಗಳ ಅಭ್ಯರ್ಥಿಗಳು ನಷ್ಟವನ್ನು ಸರಿಪಡಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಯಾರನ್ನು ನಂಬಬೇಕು ಎಂಬುದು ನಮಗಿನ್ನೂ ಅರ್ಥವಾಗುತ್ತಿಲ್ಲ. ಯಾರಿಗೆ ಬೇಕೋ ಅವರಿಗೆ ಮತ ಹಾಕುವಂತೆ ತಿಳಿಸಲಾಗಿದೆ. ಯಾರೇ ಗೆದ್ದರೂ ನಮಗೆ ನ್ಯಾಯ ಒದಗಿಸಿದರೆ ಸಾಕು ಎಂದು ತಿಳಿಸಿದ್ದಾರೆ. 

ಗ್ರಾಮದಲ್ಲಿ ಒಟ್ಟು 17,000 ಜನರಿದ್ದು, ಶೇ.90ರಷ್ಟು ಕಂಬಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com