ರಾಜ್ಯಾದ್ಯಂತ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಹೆಬ್ಬಯಕೆ: ಸರ್ಕಾರಕ್ಕೆ ಟ್ರಬಲ್ ಶೂಟರ್ ಪ್ರಾಬ್ಲಂ ಆಗಿದ್ದು ಹೇಗೆ?

ಕಳೆದ 14 ತಿಂಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಒಕ್ಕಲಿಗರ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಶಾಲಿ ನಾಯಕ ಎಂದು ...
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಬೆಂಗಳೂರು: ಕಳೆದ 14 ತಿಂಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಒಕ್ಕಲಿಗರ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಶಾಲಿ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧವಾಗಿದ್ದ, ಡಿಕೆಶಿ ಹಲವು ವರ್ಷಗಳಿಂದ ತಮ್ಮ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಹಲವು ಬಾರಿ ಆಪತ್ತಿನಲ್ಲಿದ್ದ ಸರ್ಕಾರವನ್ನು ರಕ್ಷಿಸಿದ್ದರೂ ಕೂಡ.
ಬಂಡಾಯ ಶಾಸಕ ಎಂಟಿಬಿ ನಾಗರಾಜ್ ನಿವಾಸಕ್ಕೆ ಬೆಳಗ್ಗೆಯೇ ಭೇಟಿ ನೀಡಿದ್ದ ಶಿವಕುಮಾರ್, ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಜೊತೆಗೆ ಮುಂಬೈಗೆ ತೆರಳಿ ಹೊಟೇಲ್ ನಲ್ಲಿದ್ದ ಅತೃಪ್ತ ಶಾಸಕರ ಭೇಟಿಗೂ ಯತ್ನಿಸಿದ್ದರು, ಆದರೆ ಅವರ ಪ್ರಯತ್ನ ಫಲ ಕೊಡಲಿಲ್ಲ. ಶಿವಕುಮಾರ್ ಅವರ ಬೆಂಬಲಿಗರು ಅವರನ್ನು ಟ್ರಬಲ್ ಶೂಟರ್ ಎಂದೇ ಕರೆಯುತ್ತಾರೆ.
ಪಕ್ಷ ಸಂಕಷ್ಟದಲ್ಲಿದ್ದಾಗ ಹಲವು ಬಾರಿ ಸರ್ಕಾರಕ್ಕೆ ಆಸರೆಯಾಗಿ ನಿಂತಿದ್ದರು, ಆದರೆ ಪಕ್ಷದ ಒಳಗಿನ ನಾಯಕರು ಹೇಳುವ ಪ್ರಕಾರ ಸರ್ಕಾರಕ್ಕೆ ಕಂಟಕ ಆರಂಭವಾಗಿದ್ದೆ ಡಿಕೆ ಶಿವಕುಮಾರ್ ಅವರಿಂದ ಎಂದು, ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಅನಗತ್ಯವಾಗಿ ಮಧ್ಯ ಪ್ರವೇಶಿಸಿದರು ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಆದರೆ 2018 ರಲ್ಲಿ ಬಳ್ಳಾರಿಯಲ್ಲಿ ನಡೆದ ಲೋಕಸಭೆ ಉಪ ಚುನಾವಣೆ ಮತ್ತು 2019ರ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಸಾರಥ್ಯವಹಿಸಿದ್ದ ಡಿಕೆ ಶಿವಕುಮಾರ್,  ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.
ತಮ್ಮನ್ನು ತಾವು ಒಕ್ಕಲಿಗರ ಪ್ರಭಾವಿ ನಾಯಕ ಎಂದು ಬಿಂಬಿಸಿಕೊಂಡಿರುವ  ಡಿಕೆಶಿ ತಮ್ಮ ಪ್ರಾಬಲ್ಯವನ್ನು ರಾಜ್ಯಾದ್ಯಂತ ವಿಸ್ತರಿಸುವ ಹೆಬ್ಬಯಕೆ ಅವರಿಗಿದೆ ಎಂದು ಕಾಂಗ್ರೆಸ್ ಪಡಸಾಲೆಯಿಂದ ಕೇಳಿ ಬರುತ್ತಿರುವ ಮಾತಾಗಿದೆ.
ಸದ್ಯ ಸಮ್ಮಿಶ್ರ ಸರ್ಕಾರ ಪತನವಾಗಿರುವುದರಿಂದ ಶಿವಕುಮಾರ್ ಗೆ ಹಿನ್ನಡೆಯಾಗಿದೆ,. ಏಕೆಂದರೇ ಶಿವಕುಮಾರ್ ವಿರುದ್ಧ ಐಟಿ ಪ್ರಕರಣಗಳಿವೆ, ಇದರ ಜೊತೆಗೆ  ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೂ ಕಣ್ಣಿಟ್ಟಿದ್ದಾರೆ,  ಮತ್ತೊಬ್ಬ ಒಕ್ಕಲಿಗ ನಾಯಕ ಕೃಷ್ಣ ಭೈರೇಗೌಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com