ರಾಮಮಂದಿರ ರಾಷ್ಟ್ರಮಂದಿರದಂತೆ ನಿರ್ಮಾಣವಾಗಲಿ-ನಳಿನ್ ಕುಮಾರ್ ಕಟೀಲ್   

ರಾಮ ಮಂದಿರ ನಿರ್ಮಾಣ ಮಾಡಲು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ರಾಮಮಂದಿರ ರಾಷ್ಟ್ರ ಮಂದಿರದಂತೆ ನಿರ್ಮಾಣವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

Published: 09th November 2019 04:26 PM  |   Last Updated: 09th November 2019 04:31 PM   |  A+A-


NalinKumar_kateel1

ನಳಿನ್ ಕುಮಾರ್ ಕಟೀಲ್

Posted By : Nagaraja AB
Source : UNI

ಬೆಂಗಳೂರು: ರಾಮ ಮಂದಿರ ನಿರ್ಮಾಣ ಮಾಡಲು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ರಾಮಮಂದಿರ ರಾಷ್ಟ್ರ ಮಂದಿರದಂತೆ ನಿರ್ಮಾಣವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಪೀಠ ಸರ್ವಸಮ್ಮತ ಐತಿಹಾಸಿಕ ತೀರ್ಪು ನೀಡಿದ್ದು, ಬಿಜೆಪಿ ಸರ್ವಾನುಮತದಿಂದ ಸ್ವಾಗತಿಸುತ್ತದೆ. 

ಪಂಚಪೀಠದ ಐವರು ನ್ಯಾಯಾಧೀಶರು ಒಟ್ಟಾಗಿ ಭಾರತದ ಏಕತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಕ್ಕೆ ನ್ಯಾಯಾಧೀಶರನ್ನು ಪಕ್ಷ ಅಭಿನಂದಿಸುತ್ತದೆ. ಇವರ ತೀರ್ಪು ನ್ಯಾಯಾಲಯದ ಘನತೆ ಹಾಗೂ ಸತ್ಯಮೇವ ಜಯತೆಯನ್ನು ಎತ್ತಿಹಿಡಿದಂತಾಗಿದೆ ಎಂದರು.

ಎಲ್ಲಾ ಮತ ಪಂಥಗಳು ಸೇರಿ ರಾಮಮಂದಿರ ನಿರ್ಮಾಣ ಮಾಡಬೇಕು. ಇದರಲ್ಲಿ ರಾಜಕಾರಣ ಮಾಡುವ ಅವಶ್ಯಕತೆಯಾಗಲೀ ಅನಿವಾರ್ಯತೆಯಾಗಲೀ ಪಕ್ಷಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp