ರಾಜಕೀಯ ದ್ವೇಷದಿಂದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆದಿರಬಹುದು: ಮಾಜಿ ಕಾಂಗ್ರೆಸ್ ನಾಯಕ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮೇಲಿನ ರಾಜಕೀಯ ದ್ವೇಷದಿಂದ ಎಸ್'ಡಿಪಿಐ ಜೊತೆಗೆ ಕೈಜೋಡಿಸಿ ಕೆಲವರು ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮಾಜಿ ನಾಯಕರೊಬ್ಬರು ಹೇಳಿದ್ದಾರೆ.
ಜೆಡಿಎಸ್ ನಾಯಕರಾಗಿದ್ದ ಶ್ರೀನಿವಾಸ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಮಾತಿನಂತೆ 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2018ರಲ್ಲಿ ಜೆಡಿಎಸ್ ಟಿಕೆಟ್ ಪಡೆದು ಪ್ರತಿ ಸ್ಪರ್ಧಿಯಾಗಿದ್ದ ಪ್ರಸನ್ನ ಕುಮಾರ್ ಅವರನ್ನು ಸೋಲಿಸಿದ್ದರು.
ದಾಳಿ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಗಲಭೆಕೋರರಿಗೆ ಯಾರು ಹಣ ನೀಡಿದ್ದರು ಎಂಬೂದು ತಿಳಿದುಬರಲಿದೆ ಎಂದು ಹೇಳಿದ್ದಾರೆ.
ಶಾಸಕರ ಬೆಂಬಲಿಗರು ಹೇಳಿಕೆ ನೀಡಿ, ನವೀನ್ ಜೊತೆಗೆ ಶಾಸಕರ ನಂಟು ಅಷ್ಟಕಷ್ಟೇ ಆಗಿತ್ತು. ನವೀನ್ ಜೊತೆಗೆ ಅಣ್ಣ (ಶಾಸಕ ಅಖಂಡ ಶ್ರೀನಿವಾಸ ಮೂರ್ತಿ) ಮಾತನಾಡುತ್ತಲೇ ಇರಲಿಲ್ಲ. ಶ್ರೀನಿವಾಸ ಮೂರ್ತಿಯವರು ಜೆಡಿಎಸ್ ಪಕ್ಷದಲ್ಲಿದ್ದಾಗ 2018ರಲ್ಲಿ ನವೀನ್ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ಕೊಡಿಸುವಂಕೆ ಕೇಳಿದ್ದ. ಈ ವೇಳೆ ಅವರು ನಿರಾಕರಿಸಿದ್ದರು. ಬಳಿಕ ಜೆಡಿಎಸ್ ಶ್ರೀನಿವಾಸ್ ಅವರ ಪತ್ನಿ ಶೈಲಜಾ ಅವರನ್ನು ವಾರ್ಡ್ 48ರಲ್ಲಿ ಸ್ಪರ್ಧಿಸುವಂತೆ ತಿಳಿಸಿತ್ತು. ಆದರೆ, ಈ ವೇಳೆ ಅವರು ಸೋಲು ಕಂಡಿದ್ದರು ಎಂದು ಹೇಳಿದ್ದಾರೆ
ಇದಾದ ಬಳಿಕ ನವೀನ್ ಅಣ್ಣನ ಮೇಲೆ ದ್ವೇಷ ಬೆಳೆಸಿಕೊಂಡಿದ್ದು. ಈ ಬೆಳವಣಿಗೆ ಬಳಿಕ ನವೀನ್ ಎಸ್'ಡಿಪಿಐ ಜೊತೆಗೆ ಜೋಡಿಸಿರಬಹುದು. ನವೀನ್ ಹಂಚಿಕೊಂಡಿದ್ದ ಫೇಸ್ಬುಕ್ ಪೋಸ್ಟ್ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸ್ಥಳೀಯ ನಾಯಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ