ಕಾಂಗ್ರೆಸ್ ನಾಯಕರು ತಮ್ಮ ತಾಯಂದಿರನ್ನಾದರು ನಂಬುತ್ತಾರೆಯೇ?: ಸಿಟಿ ರವಿ ಪ್ರಶ್ನೆ

ಎನ್'ಡಿಎ ಸರ್ಕಾರ ಪ್ರತೀ ಸಾಧನೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 
ಸಿಟಿ ರವಿ
ಸಿಟಿ ರವಿ

ಮಂಗಳೂರು: ಎನ್'ಡಿಎ ಸರ್ಕಾರ ಪ್ರತೀ ಸಾಧನೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಪ್ರತೀಯೊಂದನ್ನೂ ಅನುಮಾನಿಸುವ ಅಭ್ಯಾಸವಿದೆ ಎಂದು ಹೇಳಿದ್ದಾರೆ. 

ಶಿರಾ ಹಾಗೂ ರಾಜರಾಜೇಶ್ವರಿ ಉಪ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳು ಸೋಲು ಕಾಣುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗೆ ಇವಿಎಂ ಮೇಲೆ ಅನುಮಾನ ಮೂಡುತ್ತದೆ. ಅಯೋಧ್ಯೆ ತೀರ್ಪು ಬರುತ್ತಿದ್ದಂತೆಯೇ ನ್ಯಾಯಾಧೀಶರ ಮೇಲೆ ಅನುಮಾನ ಬರುತ್ತದೆ. ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಅನುಮಾನ ಬಂದಿತ್ತು. ಯೋಧರ ಮೇಲೆ ಅನುಮಾನ ಪಡುವ ಜನರು ಅವರ ತಾಯಿಯಂದಿರ ಮೇಲೂ ಅನುಮಾನ ಪಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ. 

ಇದೇ ವೇಳೆ ನೆರೆ ರಾಜ್ಯ ಕೇರಳದಲ್ಲಿ ಬಿಜೆಪಿ ಪ್ರತೀವರ್ಷ ನೂರಾರು ಕಾರ್ಯಕರ್ತರನ್ನು ಕಳೆದುಕೊಳ್ಳುವ ಕುರಿತು ಮಾತನಾಡಿ, ಕೇರಳ, ತಮಿಳುನಾಡು, ತೆಲಂಗಾಣದಲ್ಲಿಯೂ ಪಕ್ಷ ಬಲಪಡಿಸುವ ಕಾರ್ಯಗಳನ್ನು ಮಾಡಲಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com